ADVERTISEMENT

ಹೆರಿಗೆ ವೇಳೆ ಶಿಶುವಿಗೆ ಗಾಯ; ವೈದ್ಯೆಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 4:11 IST
Last Updated 28 ಡಿಸೆಂಬರ್ 2025, 4:11 IST
   

ಪ್ರಜಾವಾಣಿ ವಾರ್ತೆ

ಹಾವೇರಿ: ಇಲ್ಲಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಶಿಶುವಿನ ತಲೆಗೆ ಗಾಯವಾದ ಪ್ರಕರಣಕ್ಕೆ ಸಂಬಂಧಿಸಿ ವೈದ್ಯೆ ಡಾ. ಸ್ವಾತಿ ತಿಲಕ ಅವರಿಗೆ ಕಾರಣ ಕೇಳಿ ಜಿಲ್ಲಾ ಶಸ್ತ್ರಚಿಕಿತ್ಸಕ ಪಿ.ಆರ್.ಹಾವನೂರು ಅವರು ನೋಟಿಸ್ ನೀಡಿದ್ದಾರೆ.

‘ರಾಣೆಬೆನ್ನೂರು ಬೀಬಿಆಪ್ಸಾ (19) ಅವರ  ಹೆರಿಗೆ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ಶಿಶುವಿಗೆ ಬ್ಲೇಡ್ ತಗುಲಿ ಗಾಯವಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ನೋಟಿಸ್ ತಲುಪಿದ 24 ಗಂಟೆಯೊಳಗೆ ಲಿಖಿತ ವಿವರಣೆ ನೀಡಬೇಕು’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಶಿಶುವಿಗೆ ಕತ್ತರಿ ತಾಗಿದೆ ಎಂದು ಪೋಷಕರು ಶುಕ್ರವಾರ ಆರೋಪಿಸಿದ್ದರು. ಆದರೆ, ಅದು ಬ್ಲೇಡ್ ಎಂದು ನಂತರ ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.