
ರಾಣೆಬೆನ್ನೂರು: ಕ್ಷೀರ ಕ್ರಾಂತಿಯ ಪರಿಣಾಮ ಹಾಲು ಉತ್ಪಾದನೆಯಲ್ಲಿ ಜಗತ್ತಿನಲ್ಲಿಯೇ ಭಾರತ ಮೊದಲ ಸ್ಥಾನಕ್ಕೆ ಬಂದಿದ್ದು, ರೈತರು ತಂತ್ರಜ್ಞಾನದ ಬಳಕೆಯಿಂದ ಕೃಷಿ ಮತ್ತು ಹೈನುಗಾರಿಕೆಯಲ್ಲಿ ಇನ್ನಷ್ಟು ಪ್ರಗತಿ ಕಾಣಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ತಾಲ್ಲೂಕಿನ ಸಣ್ಣಸಂಗಾಪುರ ಗ್ರಾಮದಲ್ಲಿ ಪಶು ಸಂಗೋಪನಾ ಇಲಾಖೆ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘದ ಆಶ್ರಯದಲ್ಲಿ ಈಚೆಗೆ ನಡೆದ ಮಿಶ್ರತಳಿ ಜಾನುವಾರುಗಳಲ್ಲಿ ಹಾಲು ಕರೆಯುವ ಸ್ಪರ್ಧೆ ಹಾಗೂ ಹೆಣ್ಣು ಕರುಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಸಹಾಯಕ ನಿರ್ದೇಶಕ ಡಾ.ನೀಲಕಂಠ ಬಿ.ಅಂಗಡಿ ಮಾತನಾಡಿದರು. ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ಪಾರ್ವತಮ್ಮ ಮೂಲಿಮನಿ, ಮುಖ್ಯ ಪಶುವೈದ್ಯಾಧಿಕಾರಿ ಡಾ.ಎಚ್.ಸಿ.ಪಾಟೀಲ, ಷಣ್ಮುಖಯ್ಯ ದೇವರಮನಿ, ಮಂಜನಗೌಡ ಪಾಟೀಲ, ನಿರಂಜನಸ್ವಾಮಿ ಮೂಲಿಮನಿ, ಕರಬಸಯ್ಯ ಗೌಡರ, ಡಾ.ನಾಗರಾಜ ಕೂನಬೇವು, ಡಾ.ರವಿ ದಾಸರ, ಡಾ.ರಾಘವೇಂದ್ರ ಕಿತ್ತೂರು, ಡಾ.ರಂಗನಾಥ ಗುಡಿಸಾಗರ, ಡಾ.ಬಾಲಾಜಿ, ಡಾ.ಪವನ ಬೆಳಕೇರಿ, ಡಾ.ಯುವರಾಜ ಚೌಹಾಣ, ಡಾ.ಪವನ್ ಬಿ.ಎಲ್, ಡಾ.ನಾಗರಾಜ ಜಲ್ಲೇರ, ಡಾ.ಉಮೇಶ ಕವಲಿ, ಡಾ.ಮಹೇಶ ಕುಂಬಾರಿ, ಕುಮಾರ ಬಿ.ವಿ., ಜಗದೀಶ ಬಳ್ಳೊಳ್ಳಿ, ಎಚ್.ಆರ್.ನಾಯಕ, ಸಂಗಯ್ಯ ಜಡಿಮಠ, ಶಿವಾನಂದ ಯರಗೊಪ್ಪ, ಬಲರಾಮ್, ಖಮರುಲ್ ಹಲಗೇರಿ, ಮಲ್ಲೇಶ ತೋಟದ, ಡಾ.ರವಿ ದಾಸರ, ಹಾಲೇಶ ನಾಯಕ, ಕುಮಾರ ಬಿ.ವಿ. ಇದ್ದರು.
ಹಾಲು ಕರೆಯುವ ಸ್ಪರ್ಧೆ ವಿಜೇತರು: (ಎಚ್.ಎಫ್. ಹಸುಗಳ ವಿಭಾಗ) ಚಮನಸಾಬ್ ಬಿಲ್ಲಹಳ್ಳಿ (ಪ್ರಥಮ), ಗೀತಾ ಗೌಡರ (ದ್ವಿತೀಯ), ಕಾಳಮ್ಮ ಕಮ್ಮಾರ (ತೃತೀಯ). (ಜರ್ಸಿ ಹಸುಗಳ ವಿಭಾಗ). ಜಯಶ್ರೀ ಪಾಟೀಲ (ಪ್ರಥಮ), ಹಿರಣ್ಣಯ್ಯ ಮೂಲಿಮನಿ (ದ್ವಿತೀಯ), ಆಂಜನೇಯ ಓಣಿಮನಿ (ತೃತೀಯ) ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.