ADVERTISEMENT

ಜಾನಪದ ಸಂಸ್ಕೃತಿ ಉಳಿವಿಗೆ ಮುಂದಾಗಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2020, 14:47 IST
Last Updated 11 ಫೆಬ್ರುವರಿ 2020, 14:47 IST
ಹಾವೇರಿ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜಾನಪದ ಜಾತ್ರೆಯ ಅಂಗವಾಗಿ ಸೋಬಾನೆ ಪದಗಳ ಸ್ಪರ್ಧೆ ನಡೆಯಿತು
ಹಾವೇರಿ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಜಾನಪದ ಜಾತ್ರೆಯ ಅಂಗವಾಗಿ ಸೋಬಾನೆ ಪದಗಳ ಸ್ಪರ್ಧೆ ನಡೆಯಿತು   

ಹಾವೇರಿ: ನಶಿಸಿ ಹೋಗುತ್ತಿರುವ ಜಾನಪದ ಸಂಸ್ಕೃತಿಯ ಉಳಿವಿಗೆ ಎಲ್ಲರೂ ಮುಂದಾಗಬೇಕು ಎಂದು ಶಾಸಕ ನೆಹರು ಓಲೇಕಾರಕರೆ ನೀಡಿದರು.

ನಗರದ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ಮಂಗಳವಾರ ನಡೆದ ಜಾನಪದ ಜಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾಹಿತ್ಯದ ದೃಷ್ಟಿಯಿಂದಜಿಲ್ಲೆ ಅತ್ಯಂತ ಶ್ರಿಮಂತವಾಗಿದೆ. ಇದು ಸಂಸ್ಕೃತಿಯ ಉಳಿವಿಗೂ ಸಹಕಾರಿಯಾಗಿದೆ.ನಮ್ಮ ಹಿರಿಯರು ಆಚರಿಸುತ್ತಿದ್ದ ಹಲವಾರು ಕಲೆಗಳು ಇಂದು ಮಾಯವಾಗುತ್ತಿವೆ. ಅದರಉಳಿವೆಗೆ ಶ್ರಮಿಸಿಬೇಕು. ಜಾನಪದ ಕಲೆಯ ಸದುಪಯೋಗ, ಮನರಂಜನೆಯನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.

ADVERTISEMENT

ಸಕಲ ಕಲೆಗೆ ಜಾನಪದ ಮೂಲವಾಗಿದ್ದು, ಅದರ ಎಲ್ಲಾ ಕಲಾ ಪ್ರಕಾರಗಳನ್ನು ಒಂದೆಡೆ ಸೇರಿಸಿ ಜನರಿಗೆ ಪರಿಚಯಿಸುವ ಕೆಲಸವಾಗಬೇಕಿದೆ. ಈ ಕಾರ್ಯಕ್ರಮದ ಅನುಭವವನ್ನು ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಜನರು ಆಸ್ವಾಧಿಸಬೇಕು ಎಂದರು.

ಕಲಾ ತಂಡಗಳ ವಿವರ:ಮೇವುಂಡಿ ಗ್ರಾಮದ ರುಬೀನಾ ನದಾಫ ಇವರಿಂದ ಜಾನಪದ ಗಾಯನ, ಸವಣೂರು ಕೆ.ಸಿ.ಪರಶುರಾಮ, ರಾಣೆಬೆನ್ನೂರಿನ ಪರಶುರಾಮ ಬಣಕಾರ,ಶಿಗ್ಗಾವಿಯ ಬಸವರಾಜ ಶಿಗ್ಗಾಂವ, ಮುಗಳಿಯ ಬಸವರಾಜ ಗುಬ್ಬಿ ಹಾಗೂ ವೀರಯ್ಯ ಸಂಕೀನಮಠ,ಶರೀಪ್ ಮಾಕಪ್ಪನವರ, ಶಿಗ್ಗಾವಿಯ ಗುರಪ್ಪ ಹುಬ್ಬಳ್ಳಿ ಹಾಗೂ ವೆಂಕಮ್ಮ ಬಂಡಿವಡ್ಡರ್ ಅವರಿಂದ ಜೋಗತಿ ನೃತ್ಯ, ಬ್ಯಾಡಗಿಯ ವೀರಭದ್ರಗೌಡ ಹೊಮ್ಮರಡಿ, ಚಿಕ್ಕಲಿಂಗದಳ್ಳಿಯ ಹನುಮಂತಪ್ಪ ಅವರಿಂದ ಲಾವಣಿ ಪದ, ಮೋಟೆಬೆನ್ನೂರಿನ ಅಡಿವೆಪ್ಪ ಕುರಿಯವರ ತತ್ವಪದ, ಅಗಡಿಯ ವೀರಭದ್ರಪ್ಪ ಭಜಂತ್ರಿ ಅವರಿಂದ ಕರಡಿಮಜಲು, ಕನವಳ್ಳಿಯ ಸಂತೋಷ ಭಜಂತ್ರಿ ಹಾಗೂ ಹಿರೇಕೆರೂರಿನ ಚಿಕ್ಕಯಡಚಿಯ ಫಕ್ಕೀರಪ್ಪ ಚಲವಾದಿ ಅವರಿಂದ ನಾಸಿಕ್ ಡೋಲ್ ಸೇರಿದಂತೆ ಇನ್ನಿತರ ತಂಡಗಳು ಪಾಲ್ಗೊಳ್ಳಲಿವೆ.

ಬೇರೆ ಜಿಲ್ಲೆಯ ಕಲಾವಿದರ ತಂಡ:ದಾಂಡೇಲಿಯ ವಿದ್ಯಾಮಸಾನೆ ತಂಡದಿಂದ ಜಾನಪದ ನೃತ್ಯ, ರಾಮನಗರದ ಸುದೀಪ ತಂಡದವರಿಂದ ಪಟಕುಣಿತ, ಮೈಸೂರಿನ ದಿಲೀಪ್ ತಂಡದಿಂದ ತಮಟೆ, ಮಂಡ್ಯದ ವೆಂಕಟಸ್ವಾಮಿ ತಂಡದವರಿಂದ ನಗಾರಿ, ಚಿತ್ರದುರ್ಗದ ನರಸಿಂಹಯ್ಯ ತಂಡದವರಿಂದ ಕಹಳೆ, ಧಾರವಾಡದ ಮಂಜುನಾಥ್ ಮಾದರ ತಂಡದಿಂದ ಜಗ್ಗಲಿಗೆ, ಬೆಂಗಳೂರಿನ ಕವಿತಾ ತಂಡದವರಿಂದ ಮಹಿಳಾ ತಮಟೆ, ಕಾರವಾರದ ಜ್ಯುಲಿಯಾನಾ ಸಿದ್ದಿ ತಂಡದವರಿಂದ ಡಮಾಮಿ ನೃತ್ಯ, ಚಿತ್ರದುರ್ಗದ ಶ್ರೀನಿವಾಸ ತಂಡದವರಿಂದ ಕೀಲುಕುದುರೆ, ಚಿಕ್ಕಮಗಳೂರಿನ ಶಾರದಾ ತಂಡದವರಿಂದ ಮಹಿಳಾ ವೀರಗಾಸೆ, ಭಟ್ಕಳ ನಾಗಪ್ಪಗೊಂಡ ತಂಡದವರಿಂದ ಡಕ್ಕೆ ಕುಣಿತ, ಉಡುಪಿಯ ಸಂತೋಷ ತಂಡದವರಿಂದ ಕಂಗೀಲು ಪಾಲ್ಗೊಳ್ಳಲಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಸೋಬಾನೆ ಪದ ಶಾಂತಾ ಕಲ್ಮನಿ ತಂಡ ಪ್ರಥಮ:ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಸೋಬಾನೆ ಪದಗಳ ಸ್ಪರ್ಧೆಯಲ್ಲಿಶಾಂತಮ್ಮ ಕಲ್ಮನಿ ಕಲಾ ತಂಡ (ಪ್ರಥಮ), ಬಸವೇಶ್ವರ ಮಹಿಳಾ ಕಲಾ ತಂಡ (ದ್ವಿತೀಯ), ಅಕ್ಕ ಮಹಾದೇವಿ ಮಹಿಳಾ ಕಲಾ ತಂಡ ಮತ್ತು ರೇಣುಕಾ ಚಲವಾದಿ ಕಲಾ ತಂಡಗಳು (ತೃತೀಯ) ಸ್ಥಾನ ಪಡೆದುಕೊಂಡವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.