ADVERTISEMENT

ಸವಣೂರು: 50 ಎಕರೆಗೂ ಹೆಚ್ಚು ಬೆಳೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 23 ಜುಲೈ 2023, 15:36 IST
Last Updated 23 ಜುಲೈ 2023, 15:36 IST
ಸವಣೂರು ತಾಲ್ಲೂಕಿನಲ್ಲಿ ಮೈದುಂಬಿ ಹರಿದ ವರದಾ ನದಿ
ಸವಣೂರು ತಾಲ್ಲೂಕಿನಲ್ಲಿ ಮೈದುಂಬಿ ಹರಿದ ವರದಾ ನದಿ   

ಸವಣೂರು: ತಾಲ್ಲೂಕಿನಾದ್ಯಂತ ಭಾನುವಾರವೂ ಮಳೆ ಮುಂದುವರೆದಿದ್ದು ವರದಾ ನದಿಯ ಒಳ ಹರಿವು ಹೆಚ್ಚಾಗಿ ಕಳಸೂರ ಬ್ಯಾರೇಜ್‌ ಸಂಪೂರ್ಣ ಮುಳುಗಡೆಯಾಗಿದ್ದು, ಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಸುಮಾರು 50 ಎಕರೆಗೂ ಹೆಚ್ಚು ಬೆಳೆ ಜಲಾವೃತಗೊಂಡಿದೆ.

ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಕೆರೆ ತುಂಬಿಸುವ ಯೋಜನೆಯಲ್ಲಿ ಪಟ್ಟಣದ ಮೋತಿ ತಲಾಬ, ತಾಲ್ಲೂಕಿನ ಮಾದಾಪೂರ, ಕಾರಡಗಿ, ಹುರಳಿಕುಪ್ಪಿ, ತೆಗ್ಗಿಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಕೆರೆಗಳಿಗೆ ಅಳವಡಿಸಿದ ಪೈಪ್‌ಲೈನ್‌ ಮೂಲಕ ಕೆರೆ ತುಂಬಿಸಲು ಮೋತಿ ತಲಾಬ ಕೆರೆಗೆ ನೀರು ಬಿಡಲಾಗುತ್ತಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.

ತಾಲ್ಲೂಕಿನಾದ್ಯಂತ ನಿರಂತರ ಜಿಟಿಜಿಟಿ ಮಳೆ ಸುರಿಯುತ್ತಿರುವುದರಿಂದ ಕೃಷಿ ಜಮೀನಿನಲ್ಲಿ ನೀರು ಹೆಚ್ಚಾಗಿ ಬೆಳೆಗಳು ಹಾಳಾಗುವ ಭೀತಿ ರೈತರನ್ನು ಕಾಡುತ್ತಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.