ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗಂಗಿಭಾವಿ ದೇವಸ್ಥಾನ ಬಳಿ ಅಪಘಾತ ಸಂಭವಿಸಿದ್ದು, ಧರಿಯಪ್ಪ ಬಸಪ್ಪ ಡವಗಿ (46) ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಅವರ ಮಗ ರಾಜವೀರ (9) ಗಾಯಗೊಂಡಿದ್ದಾರೆ.
‘ಶಿಗ್ಗಾವಿ ತಾಲ್ಲೂಕಿನ ಯತ್ತಿನಹಳ್ಳಿ ನಿವಾಸಿ ಧರಿಯಪ್ಪ, ಕೆಲಸ ನಿಮಿತ್ತ ಮಗ ರಾಜವೀರ ಜೊತೆ ಬೈಕ್‌ನಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಧರಿಯಪ್ಪ ಅವರ ತಂದೆ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಸೆ. 11ರಂದು ರಾತ್ರಿ 7.30 ಗಂಟೆಯ ಸುಮಾರಿಗೆ ಧರಿಯಪ್ಪ ಹಾಗೂ ರಾಜವೀರ ಬೈಕ್‌ನಲ್ಲಿ ಹೊರಟಿದ್ದರು. ಯತ್ತಿನಹಳ್ಳಿ ಸಮೀಪದಲ್ಲಿರುವ ಗಂಗಿಭಾವಿ ದೇವಸ್ಥಾನ ಎದುರು ರಸ್ತೆ ಹಾಳಾಗಿದ್ದು, ಗುಂಡಿಗಳು ಬಿದ್ದಿವೆ. ಅತೀ ವೇಗದಲ್ಲಿ ಬೈಕ್ ಚಲಾಯಿಸಿದ್ದ ಧರಿಯಪ್ಪ, ಗುಂಡಿ ತಪ್ಪಿಸಲು ಹೋಗಿ ರಸ್ತೆ ಪಕ್ಕದ ಕಟ್ಟೆಗೆ ಡಿಕ್ಕಿ ಹೊಡೆದಿದ್ದರು. ತೀವ್ರ ಗಾಯಗೊಂಡಿದ್ದ ಧರಿಯಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಗ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.