ADVERTISEMENT

ಭಾರಿ ಮಳೆ: ತುಂಬಿ ಹರಿಯುತ್ತಿವೆ ಕೆರೆಗಳು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 15:49 IST
Last Updated 24 ಅಕ್ಟೋಬರ್ 2021, 15:49 IST
ಹಿರೇಕೆರೂರು ತಾಲ್ಲೂಕಿನ ಅಬಲೂರು ಗ್ರಾಮದ ದೊಡ್ಡ ಕೆರೆ ಭಾನುವಾರ ಭಾರಿ ಮಳೆಯಿಂದ ತುಂಬಿ ಕೋಡಿಯ ಮೂಲಕ ಹರಿಯುತ್ತಿದೆ  
ಹಿರೇಕೆರೂರು ತಾಲ್ಲೂಕಿನ ಅಬಲೂರು ಗ್ರಾಮದ ದೊಡ್ಡ ಕೆರೆ ಭಾನುವಾರ ಭಾರಿ ಮಳೆಯಿಂದ ತುಂಬಿ ಕೋಡಿಯ ಮೂಲಕ ಹರಿಯುತ್ತಿದೆ     

ಹಿರೇಕೆರೂರು: ತಾಲ್ಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿತ್ಯ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ, ಕಟ್ಟೆಗಳಿಗೆ ಸಾಕಷ್ಟು ನೀರು ಬಂದಿದೆ. ಬಹಳಷ್ಟು ಕೆರೆಗಳು ತುಂಬಿ ಹರಿಯುತ್ತಿವೆ.

ಮಳೆಯಿಂದ ಕಟಾವಿಗೆ ಬಂದಿರುವ ಗೋವಿನ ಜೋಳದ ತೆನೆ ಮುರಿಯಲು ರೈತರಿಗೆ ಆಗುತ್ತಿಲ್ಲ. ಕೆಲವೆಡೆ ನೆಲಕ್ಕೆ ಬಿದ್ದಿರುವ ಗೋವಿನ ಜೋಳದ ತೆನೆಗಳಲ್ಲಿ ಮೊಳಕೆ ಒಡೆಯುತ್ತಿವೆ. ಹತ್ತಿ ಸರಿಯಾಗಿ ಒಡೆಯುತ್ತಿಲ್ಲ, ಒಡೆದ ಹತ್ತಿ ಬಿಡಿಸಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಇದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಮಳೆಯಿಂದ ತಗ್ಗು ಪ್ರದೇಶದಲ್ಲಿ ನೀರು ನಿಲ್ಲುತ್ತಿದೆ. ಗೋವಿನ ಜೋಳದ ತೆನೆ ಮುರಿದು ಹಿಂಗಾರು ಬಿತ್ತನೆಗೆ ಹೊಲ ಸಿದ್ಧಪಡಿಸಲು ಮಳೆ ಬಿಡುವು ನೀಡುತ್ತಿಲ್ಲ ಎಂದು ಕಳಗೊಂಡ ಗ್ರಾಮದ ರೈತ ಸಿದ್ದನಗೌಡ ಪಾಟೀಲ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.