ADVERTISEMENT

ಕುದುರೆ ಏರಿ ಬಂದು ಬಜೆಟ್ ಮಂಡನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 16:21 IST
Last Updated 9 ಫೆಬ್ರುವರಿ 2023, 16:21 IST
ಹಿರೇಕೆರೂರ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಕಂಠಾಧರ ಅಂಗಡಿ ಅವರು ಕುದುರೆ ಏರಿ ಬಂದು 2023-24ನೇ ಸಾಲಿನ ಪಟ್ಟಣ ಪಂಚಾಯ್ತಿಯ ಬಜೆಟ್ ಮಂಡನೆ ಮಾಡಿದರು -ಪ್ರಜಾವಾಣಿ ಚಿತ್ರ
ಹಿರೇಕೆರೂರ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಕಂಠಾಧರ ಅಂಗಡಿ ಅವರು ಕುದುರೆ ಏರಿ ಬಂದು 2023-24ನೇ ಸಾಲಿನ ಪಟ್ಟಣ ಪಂಚಾಯ್ತಿಯ ಬಜೆಟ್ ಮಂಡನೆ ಮಾಡಿದರು -ಪ್ರಜಾವಾಣಿ ಚಿತ್ರ   

ಹಿರೇಕೆರೂರ: ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕಂಠಾಧರ ಅಂಗಡಿ ಗುರುವಾರ ಕುದುರೆ ಏರಿ ಬಂದು ಪಟ್ಟಣ ಪಂಚಾಯ್ತಿಯ 2023-24ನೇ ಸಾಲಿನ ಬಜೆಟ್ ಮಂಡಿಸಿ ಗಮನ ಸೆಳೆದರು.

ಮುಂಬರುವ ಆರ್ಥಿಕ ವರ್ಷದಲ್ಲಿ ವಿವಿಧ ಮೂಲಗಳಿಂದ ಒಟ್ಟು ₹10.56 ಕೋಟಿ ಆದಾಯ ನಿರೀಕ್ಷಿಸಲಾಗಿದ್ದು, ಪ‍ಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹10.51 ಕೋಟಿ ವೆಚ್ಚ ಮಾಡಲು ಅಂದಾಜಿಸಲಾಗಿದೆ. ಒಟ್ಟು ₹4.50 ಲಕ್ಷದ ಉಳಿತಾಯ ಬಜೆಟ್‌ ಮಂಡಿಸಲಾಗಿದೆ.

ಪಟ್ಟಣ ಪಂಚಾಯ್ತಿ ಸಭಾ ಭವನದಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಕಂಠಾಧರ ಅಂಗಡಿ ಆಯ–ವ್ಯಯದ ಸಂಕ್ಷಿಪ್ತ ವಿವರಣೆ ನೀಡಿ, ಸದಸ್ಯರಿಂದ ಅನುಮೋದನೆ ಪಡೆದರು.

ADVERTISEMENT

‘ವೇಗವಾಗಿ ಬೆಳೆಯುತ್ತಿರುವ ನಗರದ ಅವಶ್ಯಕತೆಗಳನ್ನು ಗಮನವಿರಿಸಿಕೊಂಡು ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಕಾಳಜಿವಹಿಸಲಾಗಿದೆ. ಹಿಂದುಳಿದ ಬಡಾವಣೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಹಣಕಾಸು, ಕೇಂದ್ರ ಹಣಕಾಸು ಅಯೋಗ ಹಾಗೂ ವಿಶೇಷ ಅನುದಾನದಡಿಯಲ್ಲಿ ಪಟ್ಟಣದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಆದ್ಯತೆ ನೀಡಲಾಗಿದೆ’ ಎಂದು ಸಭೆಗೆ ವಿವರಿಸಿದರು. ನಂತರ 01-02-2022ರಿಂದ 28-02-2023ರ ವರೆಗಿನ ಖರ್ಚಿನ ಬಗ್ಗೆ ಚರ್ಚೆ ನಡೆಸಲಾಯಿತು.
ನಂತರ ಬಜೆಟ್ ಮೇಲೆ ಚರ್ಚೆ ನಡೆಸಲಾಯಿತು.

ಬಜೆಟ್‌ನಲ್ಲಿ ಪಟ್ಟಣಕ್ಕೆ ಅನುಕೂಲವಾದ ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರಬೇಕಿತ್ತು. ಅದರಲ್ಲೂ ಪಟ್ಟಣದಲ್ಲಿನ ರಸ್ತೆ ಮತ್ತು ಚರಂಡಿ ದುರಸ್ತಿಗೆ ಹಾಗೂ ಹೊಸ ರಸ್ತೆ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಬೇಕಿತ್ತು ಎಂದು ಕೆಲ ಸದಸ್ಯರು ಸಲಹೆ ನೀಡಿದರು.

ಮುಖ್ಯಾಧಿಕಾರಿ ಪಂಪಾಪತಿ ನಾಯ್ಕ, ಅಕೌಂಟೆಂಟ್ ನಾಗರಾಜ ಶಾನಬೋಗ, ಉಪಾಧ್ಯಕ್ಷೆ ವಿಜಯಶ್ರೀ ಬಂಗೇರ ಸದಸ್ಯರಾದ ಕುಸುಮಾ ಬಣಕಾರ, ಸುಧಾ ಚಿಂದಿ, ದಿಲ್ಲಶಾದ ಬಳಿಗಾರ, ಸನಾವುಲ್ಲಾ ಮಕಾನದಾರ, ಚಂದ್ರಕಲಾ ಕೋರಿಗೌಡ್ರ, ಶಂಶಾದ ಕುಪ್ಪೇಲೂರ, ರಾಜು ಕರಡಿ, ಹನುಮಂತಪ್ಪ ಕುರುಬರ, ರಮೇಶ ಕೋಡಿಹಳ್ಳಿ, ರಮೇಶ ತೋರಣಗಟ್ಟಿ, ಬಸವರಾಜ ಕಟ್ಟಿಮನಿ, ಶಿವಕುಮಾರ ತಿಪ್ಪಶೇಟ್ಟಿ, ಪೂಜಾ ತಂಬಾಕದ, ಅಲ್ತಾಫ್ ಖಾನ್ ಪಠಾಣ, ರಜಿಯಾ ಅಸದಿ, ಕವಿತಾ ಹಾರ್ನಳ್ಳಿ, ಹೊನ್ನಪ್ಪ ಸಾಲಿ, ಹನುಮಂತಪ್ಪ ಮಡಿವಾಳರ ಹಾಗೂ ಪ.ಪಂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.