ಹಿರೇಕೆರೂರ: ಆರೋಗ್ಯಕರ ಪರಿಸರ, ಆರ್ಥಿಕ ಲಾಭಕ್ಕೆ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗೆ ಸಾವಯುವ ಕೃಷಿ ಅನೂಕೂಲವಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಜು ಲಮಾಣಿ ಹೇಳಿದರು.
ತಾಲ್ಲೂಕಿನ ಚನ್ನಳ್ಳಿ ತಾಂಡಾ ಗ್ರಾಮದಲ್ಲಿ ಮನು ವಿಕಾಸ ಸಂಸ್ಥೆ ಕರ್ಜಗಿ ಮತ್ತು ಈಡಲ್ಗಿವ್ ಫೌಂಡೇಷನ್ ಸಹಭಾಗಿತ್ವದಲ್ಲಿ ಗ್ರಾಮೀಣ ರೈತ ಮಹಿಳೆಯರಿಗೆ ಸುಸ್ಥಿರ ಕೃಷಿ ತರಬೇತಿ ಹಮ್ಮಿಕೊಂಡಿದ್ದು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿ ಸಾವಯುವ ಕೃಷಿಯಲ್ಲಿ ತೊಡಗಿದ ರೈತ ಚನ್ನಬಸಪ್ಪ ಎಸ್. ಶಿರೂರ ಸಾವಯವ ಕೃಷಿ ಮತ್ತು ಅದರ ಪ್ರಯೋಜನಗಳು ಹಾಗೂ ಅತಿಯಾದ ಕ್ರಿಮಿನಾಶಕಗಳು ಮತ್ತು ರಸಗೊಬ್ಬರ ಇವುಗಳ ಬಗ್ಗೆ ತರಬೇತಿಯನ್ನು ನೀಡಿದರು.
ಮಲ್ಲೇಶ ಲಮಾಣಿ ,ಲಲಿತಮ್ಮ , ರಾಜಣ್ಣ ಬುರಡಿಕಟ್ಟಿ , ಕಾಮಾಕ್ಷಿ ರೇವಣಕರ , ನವೀನ್ ಹುಲ್ಲತ್ತಿ , ಹುತ್ತೇಶ ಲಮಾಣಿ , ಬಸವರಾಜ ಗುಡದಳ್ಳಿ, ಕುಸುಮಾ ಕೋಟಗದ್ದೆ , ಶ್ರುತಿ ಲಮಾಣಿ ಮತ್ತು ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.