ADVERTISEMENT

ಹಾವೇರಿ: ಟಿಪ್ಪರ್ ಮಾಲೀಕನ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 5:27 IST
Last Updated 8 ಅಕ್ಟೋಬರ್ 2025, 5:27 IST
   

ಹಾವೇರಿ: ಜಿಲ್ಲೆಯ ಗುತ್ತಲ–ರಾಣೆಬೆನ್ನೂರು ರಸ್ತೆ ಮೂಲಕ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದು, ಅದರ ಮಾಲೀಕ ಹಾಗೂ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಗುತ್ತಲ ಹೊಂಡದ ಬಳಿ ಸೋಮವಾರ ತಡರಾತ್ರಿ ಗಸ್ತಿನಲ್ಲಿದ್ದ ಸಿಬ್ಬಂದಿ, ವಾಹನಗಳ ತಪಾಸಣೆ ನಡೆಸುತ್ತಿದ್ದರು. ಇದೇ ಮಾರ್ಗದಲ್ಲಿ ಬಂದಿದ್ದ ಟಿಪ್ಪರ್‌ ವಾಹನದಲ್ಲಿ (ಕೆಎ 68, 3171) ಮರಳು ಇರುವುದನ್ನು ಗಮನಿಸಿದ್ದರು. ವಾಹನ ತಡೆದು ಪರಿಶೀಲಿಸಿದಾಗ, ಪರ್ಮಿಟ್‌ ಇಲ್ಲದಿರುವುದು ಗೊತ್ತಾಗಿದೆ’ ಎಂದು ಗುತ್ತಲ ಠಾಣೆ ಪೊಲೀಸರು ಹೇಳಿದರು.

‘ತುಂಗಭದ್ರಾ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ತೆಗೆದು, ಟಿಪ್ಪರ್ ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಸರ್ಕಾರಕ್ಕೆ ವಂಚಿಸಲಾಗುತ್ತಿತ್ತು. ಟಿಪ್ಪರ್‌ನಲ್ಲಿದ್ದ ಸುಮಾರು ₹ 12 ಸಾವಿರ ಮೌಲ್ಯದ ಮರಳು ಜಪ್ತಿ ಮಾಡಲಾಗಿದೆ. ಟಿಪ್ಪರ್ ಮಾಲೀಕ ಯತ್ತಿನಹಳ್ಳಿಯ ಬಸವರಾಜ ಗುಡ್ಡನಗೌಡ ಪಾಟೀಲ ಹಾಗೂ ಚಾಲಕ ಪರಶುರಾಮ ಬಾಳಿಕಾಯಿ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಚಾಲಕನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.