ADVERTISEMENT

ಜೈ ಶೈಲೇಶ್‌, ನಿರ್ಮಲಾಗೆ ಪ್ರಶಸ್ತಿ

ಕರ್ನಾಟಕ ರಾಜ್ಯ ಯೋಗಾಸನ ಸ್ಪೋರ್ಟ್ಸ್‌ ಲೀಗ್‌–2020 ಆನ್‌ಲೈನ್‌ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 15:11 IST
Last Updated 21 ಜೂನ್ 2020, 15:11 IST

ಹಾವೇರಿ: ಯೋಗಸ್ತೋಮ ಯೋಗ ಪ್ರತಿಷ್ಠಾನ ಮತ್ತು ಹಾವೇರಿ ಜಿಲ್ಲಾ ಯೋಗಾಸನ ಸ್ಪೋರ್ಟ್ಸ್‌ ಅಸೋಸಿಯೇಷನ್‌ ವತಿಯಿಂದ 6ನೇ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಕರ್ನಾಟಕ ರಾಜ್ಯ ಯೋಗಾಸನ ಸ್ಪೋರ್ಟ್ಸ್‌ ಲೀಗ್‌–2020 ಆನ್‌ಲೈನ್‌ ಸ್ಪರ್ಧೆಯನ್ನು ಜೂನ್‌ 1ರಿಂದ ಜೂನ್‌ 12ರವರೆಗೆ ಏರ್ಪಡಿಸಲಾಗಿತ್ತು. ಇದರ ಫಲಿತಾಂಶವನ್ನು ಭಾನುವಾರ ಪ್ರಕಟಿಸಲಾಯಿತು.

ಪುರುಷ ಮತ್ತು ಮಹಿಳಾ ವಿಭಾಗ ಸೇರಿದಂತೆ ರಾಜ್ಯದಾದ್ಯಂತ ಒಟ್ಟು481 ಯೋಗಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಪ್ರವೇಶ ಶುಲ್ಕ ಉಚಿತವಾಗಿದ್ದು, ವಯೋಮಿತಿಯ ನಿಬಂಧನೆ ಇರಲಿಲ್ಲ. ಎರಡೂ ವಿಭಾಗಗಳಲ್ಲಿ ‘ಟಾಪ್‌ ಟೆನ್‌’ ಸ್ಥಾನ ಪಡೆದವರಿಗೆ ಪದಕ ಮತ್ತು ಅಭಿನಂದನಾ ಪತ್ರ ಕಳುಹಿಸಿಕೊಡುತ್ತೇವೆ ಎಂದು ಹಾವೇರಿ ಜಿಲ್ಲಾ ಯೋಗಾಸನ ಸ್ಪೋರ್ಟ್ಸ್‌ ಅಸೋಸಿಯೇಷನ್‌ ಮುಖ್ಯಸ್ಥ ಪ್ರೇಮಕುಮಾರ ಮುದ್ದಿ ತಿಳಿಸಿದರು.

ಪ್ರಶಸ್ತಿಯ ವಿವರ:

ADVERTISEMENT

‘ಮಿಸ್ಟರ್‌ ಯೋಗಿ ಆಫ್‌ ದಿ ಕರ್ನಾಟಕ’ ಪ್ರಶಸ್ತಿಗೆ ಬೆಳಗಾವಿಯ ಜೈ ಶೈಲೇಶ್‌ ಪ್ರಭು,‘ಮಿಸ್‌ ಯೋಗಿನಿ ಆಫ್‌ ದಿ ಕರ್ನಾಟಕ’ ಪ್ರಶಸ್ತಿಗೆ ಶಿವಮೊಗ್ಗದ ನಿರ್ಮಲಾ ಕೊಡ್ಲಿಕರ್‌,‘ದಿ ಮೋಸ್ಟ್‌ ಎಂಟರ್‌ಟೈನರ್‌ ಆಫ್‌ ದಿ ಲೀಗ್‌’ ಪ್ರಶಸ್ತಿಗೆ ಪುರುಷರ ವಿಭಾಗದಲ್ಲಿ ಬೆಂಗಳೂರಿನ ಎ.ಯಶವಂತ, ಮಹಿಳಾ ವಿಭಾಗದಲ್ಲಿ ಧಾರವಾಡದ ಅನನ್ಯಾ ಹಿರೇಮಠ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.