ADVERTISEMENT

ಶಿಕ್ಷಣದ ಬಲವರ್ಧನೆಗಾಗಿ ಎಸ್ಎಫ್ಐ ಸೇರಿ: ಸಾಹಿತಿ, ದೇವರಾಜ ಹುಣಸಿಕಟ್ಟಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 2:51 IST
Last Updated 6 ಜುಲೈ 2025, 2:51 IST
ರಾಣೆಬೆನ್ನೂರಿನ ಸಂಜೀವಿನಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಎಸ್ಎಫ್ಐ ತಾಲ್ಲೂಕು ಸಮಿತಿ ಆಯೋಜಿಸಿದ ಶೈಕ್ಷಣಿಕ ಸಾಲಿನ ಎಸ್ಎಫ್ಐ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಸಾಹಿತಿ, ಬರಹಗಾರ ದೇವರಾಜ ಹುಣಸಿಕಟ್ಟಿ ಚಾಲನೆ ನೀಡಿದರು. 
ರಾಣೆಬೆನ್ನೂರಿನ ಸಂಜೀವಿನಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಎಸ್ಎಫ್ಐ ತಾಲ್ಲೂಕು ಸಮಿತಿ ಆಯೋಜಿಸಿದ ಶೈಕ್ಷಣಿಕ ಸಾಲಿನ ಎಸ್ಎಫ್ಐ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಸಾಹಿತಿ, ಬರಹಗಾರ ದೇವರಾಜ ಹುಣಸಿಕಟ್ಟಿ ಚಾಲನೆ ನೀಡಿದರು.    

ರಾಣೆಬೆನ್ನೂರು: ವಿದ್ಯಾರ್ಥಿ ಸಮೂಹ ಇನ್ನಷ್ಟು ಕ್ರಿಯಾಶೀಲತೆಗಾಗಿ ವಿದ್ಯಾರ್ಥಿ ಚಳುವಳಿಗಳು ಬಲಗೊಳ್ಳಬೇಕು. ಅನ್ಯಾಯದ ವಿರುದ್ಧ ವ್ಯವಸ್ಥೆಯ ವಿರುದ್ಧ ವಿದ್ಯಾರ್ಥಿ ಸಮುದಾಯದ ಧ್ವನಿಯಾಗಿದ ಎಸ್ಎಫ್ಐ ಸಂಘಟನೆಗೆ ವಿದ್ಯಾರ್ಥಿಗಳು ಸೇರಬೇಕು ಎಂದು ಸಾಹಿತಿ, ಬರಹಗಾರ ದೇವರಾಜ ಹುಣಸಿಕಟ್ಟಿ ಹೇಳಿದರು.

ನಗರದ ಸಂಜೀವಿನಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ಎಸ್ಎಫ್ಐ ತಾಲ್ಲೂಕು ಸಮಿತಿ ಆಯೋಜಿಸಿದ ಶೈಕ್ಷಣಿಕ ಸಾಲಿನ ಎಸ್ಎಫ್ಐ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಶದ ಅವ್ಯವಸ್ಥೆ ಬದಲಾವಣೆ ವಿದ್ಯಾರ್ಥಿ-ಯುವಜನರ ಕೈಯಲ್ಲಿದೆ. ವಿದ್ಯಾರ್ಥಿ ಸಮುದಾಯದ ಐಕ್ಯತೆಗಾಗಿ ದೇಶಪ್ರೇಮಿ ವಿದ್ಯಾರ್ಥಿ ಸಂಘಟನೆ ಎಸ್ಎಫ್ಐ ಸೇರಿರಿ, ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸಮುದಾಯ ಜಾಗೃತವಾಗಲಿ, ಸಂಘಟಿತವಾಗಲಿ, ನಾಯಕತ್ವ ಗುಣ ಬೆಳಸಿಕೊಳ್ಳಲಿ, ವ್ಯವಸ್ಥೆಯ ಲೋಪದೋಷಗಳ ಪ್ರಶ್ನಿಸುವಂತಾಗಲಿ ಎಂದರು.

ADVERTISEMENT

ಎಸ್ಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಎಸ್ ಮಾತಾನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳಾದ ಬಸ್‌, ವಿದ್ಯಾರ್ಥಿವೇತನ, ವಸತಿ ನಿಲಯ, ಗ್ರಂಥಾಲಯ, ಕುಡಿಯುವ ನೀರು, ಪಠ್ಯಕ್ರಮ ಮುಂತಾದ ಸಮಸ್ಯೆಗಳ ಇತ್ಯರ್ಥಕ್ಕೆ, ಈ ದೇಶ ನಾಡು ನುಡಿ, ಶಿಕ್ಷಣದ ಉಳಿವಿಗಾಗಿ ಹೋರಾಟದ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ಎಸ್ಎಫ್ಐ ವಿದ್ಯಾರ್ಥಿ ಚಳುವಳಿ ಸೇರಿರಿ. ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸೋಣ, ಕ್ಯಾಂಪಸ್ ಡೆಮಾಕ್ರಸಿ ಗಟ್ಟಿಗೊಳಿಸೋಣ‌ ಎಂದರು. ಇದೇ ಸಂದರ್ಭದಲ್ಲಿ ನೂರಾರು ವಿದ್ಯಾರ್ಥಿಗಳು ಸದಸ್ಯತ್ವ ಪಡೆದರು.

ಪ್ರಾಚಾರ್ಯ ಪ್ರಭುಲಿಂಗ ಕೋಡದ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಸಾಕ್ಕನವರ, ಅರುಣ್ ನಾಗವತ, ಗೌತಮ್ ಸಾವಕ್ಕನವರ, ಕೃಷ್ಣ ನಾಯಕ, ನಂದಿನಿ ಎಚ್, ಗಜೇಂದ್ರ ಎನ್, ಮಾಂತೇಶ್, ಉಷ್ ಕೆ ಆರ್, ಸವಿತಾ ಗೌಡ್ರ, ಮಾಂತೇಶ ಕಂಬಳಿ, ಭರಮಪ್ಪ ಮೆಡ್ಲೇರಿ, ವಿದ್ಯಾ ಎಸ್, ಶಿಲ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.