ADVERTISEMENT

ಕನವಳ್ಳಿ: ಕತ್ತು ಕೊಯ್ದು ಮಹಿಳೆ ಕೊಲೆ 

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 2:41 IST
Last Updated 8 ಡಿಸೆಂಬರ್ 2025, 2:41 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ರಾಣೆಬೆನ್ನೂರು: ಇಲ್ಲಿನ ಕೂನಬೇವು ರಸ್ತೆಯ ಅಂಬೇಡ್ಕರ್ ನಗರ ಸಮೀಪದ ಎಂ.ಜೆ.ಪಾಟೀಲ ಅವರ ಸೀಡ್ಸ್‌ ತಯಾರಿಕೆ ಘಟಕದ ಬಳಿ ನಿವಾಸಿ ಲಲಿತಾ ಕರಿಬಸಪ್ಪ ಬ್ಯಾಡಗಿ (42) ಎಂಬ ಮಹಿಳೆಯನ್ನು ಯಾರೋ ಕತ್ತು ಕೊಯ್ದು ಕೊಲೆ ಮಾಡಿದ ಘಟನೆ ಭಾನುವಾರ ನಡೆದಿದೆ.

ADVERTISEMENT

ಪ್ರೀತಿ ಪ್ರೇಮದಿಂದ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾ ಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖ
ಲಾಗಿದೆ. ಮೃತ ಮಹಿಳೆಯನ್ನು ಮರಣೋ ತ್ತರ ಪರೀಕ್ಷೆಗೆ ಶವ ಸಾಗಿಸಲಾಗಿದೆ. ಆರೋಪಿಗಳ ಪತ್ತೆಗೆ ನಗರಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಿನ್ನೆಲೆ: ಕೊಲೆಯಾದ ಮಹಿಳೆ ಮೂಲತ: ಹಾವೇರಿ ತಾಲ್ಲೂಕಿನ ಕನವಳ್ಳಿ ಗ್ರಾಮದಳು. ಇವರನ್ನು ಬ್ಯಾಡಗಿ ತಾಲ್ಲೂಕಿನ ಕೆರೂಡಿಗೆ ಮದುವೆ ಮಾಡಿ ಕೊಡಲಾಗಿತ್ತು. ಅವರಿಗೆ ಇಬ್ಬರು ಪುತ್ರರು ಇದ್ದಾರೆ. ಗಣೇಶ ಬ್ಯಾಡಗಿ (19) ಎಂಬಾತನು ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಇನೊಬ್ಬ ಶಿವು ಬ್ಯಾಡಗಿ (16) ಇದ್ದಾರೆ.

ಕೆರೂಡಿಯಲ್ಲಿ ಅಲ್ಲಿ ಆಕೆಯ ಪತಿ ಸಾವನ್ನಪ್ಪಿದ್ದಕ್ಕೆ ರಾಣೆಬೆನ್ನೂರಿನ ಎಂ.ಜಿ.ಪಾಟೀಲ ಅವರ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಎಂ.ಜಿ. ಪಾಟೀಲ ಅವರ ಜಮೀನಿನ ಆವರಣದಲ್ಲಿರುವ ಚಿಕ್ಕ ಮನೆಯಲ್ಲಿ ವಾಸವಾಗಿದ್ದರು. ಭಾನುವಾರ ಬೆಳಿಗ್ಗೆ ಲಲಿತಾ ಬ್ಯಾಡಗಿ ಅವರು ಕೆಲಕ್ಕೆ ಏಕೆ ಬಂದಿಲ್ಲ ಎಂದು ಮಹಿಳೆಯೊಬ್ಬರು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.