ADVERTISEMENT

ಕಾರಡಗಿ ವೀರಭದ್ರೇಶ್ವರ ಕಾರ್ತೀಕೋತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 2:51 IST
Last Updated 20 ನವೆಂಬರ್ 2025, 2:51 IST
ಸವಣೂರು ತಾಲ್ಲೂಕಿನ ಕಾರಡಗಿ ಶ್ರೀ ವೀರಭದ್ರೇಶ್ವರ ದೇವಸ್ಥಾನ
ಸವಣೂರು ತಾಲ್ಲೂಕಿನ ಕಾರಡಗಿ ಶ್ರೀ ವೀರಭದ್ರೇಶ್ವರ ದೇವಸ್ಥಾನ   

ಸವಣೂರು : ತಾಲ್ಲೂಕಿನ ಕಾರಡಗಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ನ. 20 ರಂದು ಸಂಜೆ 7ಗಂಟೆಗೆ ಕಾರ್ತೀಕೋತ್ಸವ, ವಿವಿಧ ಧಾರ್ಮಿಕ ಹಾಗೂ ಮನರಂಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಕಾರ್ತೀಕೋತ್ಸವದ ಅಂಗವಾಗಿ ಪ್ರಾಥ:ಕಾಲ ವೀರಭದ್ರೇಶ್ವರ ದೇವರ ಉದ್ಭವ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯ ಕೈಗೊಳ್ಳಲಾಗುವದು.

ಸಂಜೆ 7 ಗಂಟೆಗೆ ಜರಗುವ ಕಾರ್ತೀಕೋತ್ಸವ ಹಾಗೂ ಧರ್ಮಸಭೆಯ ಸಾನ್ನಿಧ್ಯವನ್ನು ಮಂತ್ರವಾಡಿ ಹಿರೇಮಠದ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ADVERTISEMENT

ವೀರಭದ್ರೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ನಂತರ, ಸವಣೂರು ಹವ್ಯಾಸಿ ಕಲಾ ಬಳಗ ಹಾಗೂ ಹಿರಿಯ ದೊಡ್ಡಾಟ ಕಲಾವಿದರಿಂದ ಅಭಿಮನ್ಯು ಪರ್ವ ದೊಡ್ಡಾಟ ಪ್ರದರ್ಶನ ಮತ್ತು ವಿವಿಧ ಕಲಾವಿದರಿಂದ ಮನರಂಜನಾ ಕಾರ್ಯಕ್ರಮ ಜರಗುವುದು.

ನಮ್ಮ ಸವಣೂರು ಹವ್ಯಾಸಿ ಕಲಾ ಬಳಗದ ದೊಡ್ಡಾಟ ಕಲಾವಿದ ಬಾಪುಗೌಡ ಕೊಪ್ಪದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.