ADVERTISEMENT

ಹಾವೇರಿ | ಸ್ವಾತಂತ್ರ್ಯ ಸಂಗ್ರಾಮಕ್ಕೆ ಚನ್ನಮ್ಮ ಸ್ಫೂರ್ತಿ: ಭುವನೇಶ್ವರ ಶಿಡ್ಲಾಪೂರ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 3:03 IST
Last Updated 27 ಅಕ್ಟೋಬರ್ 2025, 3:03 IST
ಹಾವೇರಿ ತಾಲ್ಲೂಕಿನ ಹಿರೇಹುಲ್ಲಾಳ ಗ್ರಾಮದಲ್ಲಿ ‘ಕಿತ್ತೂರಿನ ವೀರರಾಣಿ ಚನ್ನಮ್ಮ ಜಯಂತ್ಯುತ್ಸವ’ ಕಾರ್ಯಕ್ರಮ ನಡೆಯಿತು
ಹಾವೇರಿ ತಾಲ್ಲೂಕಿನ ಹಿರೇಹುಲ್ಲಾಳ ಗ್ರಾಮದಲ್ಲಿ ‘ಕಿತ್ತೂರಿನ ವೀರರಾಣಿ ಚನ್ನಮ್ಮ ಜಯಂತ್ಯುತ್ಸವ’ ಕಾರ್ಯಕ್ರಮ ನಡೆಯಿತು   

ಹಾವೇರಿ: ‘ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮಕ್ಕೆ ವೀರರಾಣಿ ಕಿತ್ತೂರಿನ ಚನ್ನಮ್ಮ ಅವರು ಸ್ಫೂರ್ತಿಯಾಗಿದ್ದರು’ ಎಂದು ರೈತ ಮುಖಂಡ ಭುವನೇಶ್ವರ ಶಿಡ್ಲಾಪೂರ ಹೇಳಿದರು.

ತಾಲ್ಲೂಕಿನ ಹಿರೇಹುಲ್ಲಾಳ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ‘ಕಿತ್ತೂರಿನ ವೀರರಾಣಿ ಚನ್ನಮ್ಮ ಜಯಂತ್ಯುತ್ಸವ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಕಿತ್ತೂರು ಚನ್ನಮ್ಮ ಅವರ ಸ್ವಾತಂತ್ರ್ಯ ಪ್ರೇಮ, ದೇಶಭಕ್ತಿ ಹಾಗೂ ಹೋರಾಟದ ಬದುಕು ಇಂದಿನ ಯುವಜನರಿಗೆ ಆದರ್ಶವಾಗಿದೆ’ ಎಂದರು.

ADVERTISEMENT

‘ಕನ್ನಡ ನಾಡು ಹಿಂದಿನಿಂದಲೂ ಸಾಕಷ್ಟು ವೀರ–ಶೂರರನ್ನೂ ಕಂಡಿದೆ. ಉತ್ತರ ಕರ್ನಾಟಕದ ಗಂಡುಗಲಿಗಳ ನಾಡು ಎಂದೇ ಪ್ರಸಿದ್ಧಿ ಪಡೆದಿರುವ ಬೆಳಗಾವಿಯ ಕಿತ್ತೂರು ಸಂಸ್ಥಾನ ಆಳಿದ್ದ ವೀರರಾಣಿ ಚನ್ನಮ್ಮ, ಬ್ರಿಟಿಷರ ಹುಟ್ಟಡಗಿಸಿದ್ದರು. ಏಕಾಂಗಿಯಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಕನ್ನಡಿಗರ ಧೈರ್ಯಕ್ಕೆ ಸಾಕ್ಷಿಯಾದರು’ ಎಂದರು.

ಮುಖಂಡ ಕರಬಸಪ್ಪ ಶಿವೂರ ಮಾತನಾಡಿ, ‘ಚನ್ನಮ್ಮ ಕೇವಲ ಒಂದು ಸಮಾಜಕ್ಕೆ ಮೀಸಲಾದ ವೀರ ಮಹಿಳೆಯಲ್ಲ. ರಾಷ್ಟ್ರಕ್ಕೆ ಕೀರ್ತಿ ತಂದ ಮಹಿಳೆ. ತಮ್ಮ ಶಿಸ್ತುಬದ್ಧ ಆಡಳಿತ ಮತ್ತು ಅಂತಃಕರಣಭರಿತ ನಿರ್ಣಯಗಳಿಂದಾಗಿ ರಾಣಿ ಚನ್ನಮ್ಮ ಅವರು ಇತಿಹಾಸದಲ್ಲಿ ಸುಭದ್ರ ಸ್ಥಾನ ಪಡೆದಿದ್ದಾರೆ’ ಎಂದರು.

ಅನಿತಾ ಶಿವೂರ, ಮಾಲತೇಶ ಸೊಪ್ಪಿನ, ಸಿದ್ದಲಿಂಗಪ್ಪ ಕಮಡೊಳ್ಳಿ ಹಾಗೂ ಸಮಾಜದ ಜನರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.