
ಬ್ಯಾಡಗಿ: ತಾಲ್ಲೂಕಿನ ಕಲ್ಲೆದೇವರು ಗ್ರಾಮದ ಹೊರವಲಯದಲ್ಲಿರುವ ಕುರಿಮರಿ ದೊಡ್ಡಿಯಲ್ಲಿರುವ 40ಕ್ಕೂ ಹೆಚ್ಚು ಕುರಿಮರಿಗಳು ಶುಕ್ರವಾರ ಮೃತಪಟ್ಟಿವೆ. ಚಿರತೆ ದಾಳಿ ನಡೆಸಿದ ಪರಿಣಾಮ ಕೂಡಿ ಹಾಕಿದ್ದ 40ಕ್ಕೂ ಹೆಚ್ಚು ಮರಿಗಳು ಮೃತಪಟ್ಟಿವೆ ಎಂದು ಶಂಕಿಸಲಾಗಿದೆ.
ಗ್ರಾಮದ ಲಚಮಪ್ಪ ಕನ್ನಪ್ಪ ಲಮಾಣಿ ಮತ್ತು ಪೀರಪ್ಪ ಶಂಕ್ರಪ್ಪ ಲಮಾಣಿ ಎಂಬುವರಿಗೆ ಸೇರಿದ ಕುರಿಮರಿಗಳು ಮೃತಪಟ್ಟಿವೆ.
‘ದಡ್ಡಿಯಲ್ಲಿ ಸಣ್ಣ ಮರಿಗಳನ್ನು ಕೂಡಿ ಹಾಕಿ, ಕುರಿ ಮೇಯಿಸಲು ಅರಣ್ಯಕ್ಕೆ ತೆರಳಿದಾಗ ಚಿರತೆ ದಾಳಿ ನಡೆಸಿರಬಹುದು ಎಂದು ಕುರಿ ಮಾಲೀಕರು ತಿಳಿಸಿದ್ದಾರೆ.
ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಪರಿಶೀಲನೆ ನಡೆಸದ ನಂತರ ನಿಖರ ಮಾಹಿತಿ ದೊರೆಯಲಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಆಗಮಿಸಿ ಗಾಯಗೊಂಡ ಕುರಿಮರಿಗಳಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.