ಹಾನಗಲ್: ‘ಡಾ.ಜಿ.ಎಸ್.ಆಮೂರ ಅವರು ನಾಟಕ ಹಾಗೂ ಕಾದಂಬರಿ ಕ್ಷೇತ್ರದ ವಿಮರ್ಶೆಯಲ್ಲಿ ಹೆಸರು ಮಾಡಿದ್ದಾರೆ‘ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ ಹೇಳಿದರು.
ಡಾ.ಜಿ.ಎಸ್.ಅಮೂರ ಅವರ ಹುಟ್ಟೂರು ತಾಲ್ಲೂಕಿನ ಬಮ್ಮನಹಳ್ಳಿಯಲ್ಲಿ ಬುಧವಾರ ನಡೆದ ಆಮೂರ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಆಮೂರ ಅವರ ಸಾಹಿತ್ಯದ ಓದು ಮನೆ ಮಾತಾಗಬೇಕು’ ಎಂದರು.
ಬಮ್ಮನಹಳ್ಳಿ ಗುರುಪಾದೇಶ್ವರ ವಿರಕ್ತಮಠದ ಶಿವಯೋಗೀಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ, ‘ವಿಮರ್ಶಾ ಸಾಹಿತ್ಯದಲ್ಲಿ ಹೆಸರಾದ ಡಾ.ಜಿ.ಎಸ್.ಆಮೂರ ಅವರು ಸಾಹಿತ್ಯ ಕ್ಷೇತ್ರದ ನಂದಾದೀಪ. ಬರಹಗಾರರಿಗೆ ಪ್ರೇರಣೆಯಾಗಿ, ಸಾಹಿತ್ಯ ಅಭಿರುಚಿಗೆ ಶಕ್ತಿಯಾಗಿ, ಸಾಹಿತ್ಯ ಕ್ಷೇತ್ರದ ನಿರ್ಮಲ ಸಾಹಿತಿ ವಿಮರ್ಶಕ ಡಾ.ಜಿ.ಎಸ್.ಅಮೂರ ಅವರ ಜೀವನ ಸಾರ್ಥಕವಾಗಿದೆ‘ ಎಂದರು.
ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಸೃಜನಶೀಲತೆಗೆ ಸತ್ವ ತಂದುಕೊಟ್ಟ ಜಿ.ಎಸ್.ಆಮೂರ ಅವರು ಅಪಾರ ಅಧ್ಯಯನದ ಮೂಲಕ ಎತ್ತರಕ್ಕೆ ಬೆಳೆದವರು. ಮಾನವೀಯ ಪ್ರೀತಿಯ ಬರಹಗಾರರಾಗಿ ಅತ್ಯಂತ ನಿಷ್ಠುರ, ಸಮಯ ಪ್ರಜ್ಞೆಯಿಂದ ಸಾಹಿತ್ಯ ಲೋಕದಲ್ಲಿ ಬೆಳಗಿದವರು ಎಂದರು.
ಸಾಹಿತಿ ಚನ್ನಪ್ಪ ಅಂಗಡಿ ಮಾತನಾಡಿದರು. ಸಾಹಿತಿ ಮಾರುತಿ ಶಿಡ್ಲಾಪೂರ, ಶ್ರೀನಿವಾಸ ವಾಡಪ್ಪಿ, ಬಿ.ಎ.ಕುಲಕರ್ಣಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಿರೀಶ ಪದಕಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ.ಸಾಲಿಮಠ, ಪದ್ಮನಾಭ ಕುಂದಾಪೂರ, ಎಸ್.ಬಿ.ಬಿಂಗೇರಿ, ಹರೀಶ ನಾಯಕ, ಆರ್.ಎಂ.ಜೋಶಿ, ಶಿವಾನಂದ ಕ್ಯಾಲಕೊಂಡ, ಎಸ್.ವಿ.ಹೊಸಮನಿ, ಅಣ್ಣಬಸವ ನೆಲವಿಗಿ, ಜೀವರಾಜ ಛತ್ರದ, ಬಿ.ಎಸ್.ಕರಿಯಣ್ಣನವರ, ನರಸಿಂಹ ಕೋಮಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.