ADVERTISEMENT

ಲಯನ್ಸ್‌ ಕ್ಲಬ್‌ ಸುವರ್ಣ ಮಹೋತ್ಸವ

ವಿರೂಪಾಕ್ಷ ಜಿ. ಬಣಕಾರ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 16:38 IST
Last Updated 8 ಜುಲೈ 2022, 16:38 IST
ಲಯನ್ಸ್‌ ಕ್ಲಬ್‌ನ ಮಾಜಿ ಅಧ್ಯಕ್ಷ ವಿರೂಪಾಕ್ಷ ಹಾವನೂರ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿರೂಪಾಕ್ಷ ಜಿ. ಬಣಕಾರ ಅವರಿಗೆ ಮೋನಿಕಾ ಸಾವಂತ ಅವರ ನೇತೃತ್ವದಲ್ಲಿ ಅಧಿಕಾರ ಹಸ್ತಾಂತರಿಸಿದರು
ಲಯನ್ಸ್‌ ಕ್ಲಬ್‌ನ ಮಾಜಿ ಅಧ್ಯಕ್ಷ ವಿರೂಪಾಕ್ಷ ಹಾವನೂರ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿರೂಪಾಕ್ಷ ಜಿ. ಬಣಕಾರ ಅವರಿಗೆ ಮೋನಿಕಾ ಸಾವಂತ ಅವರ ನೇತೃತ್ವದಲ್ಲಿ ಅಧಿಕಾರ ಹಸ್ತಾಂತರಿಸಿದರು   

ಹಾವೇರಿ: ಇಲ್ಲಿಯ ಹಾವೇರಿ ಲಯನ್ಸ್‌ ಕ್ಲಬ್ 50ನೇ ವರ್ಷಕ್ಕೆ ಪಾದಾರ್ಪಣೆಯ ಪ್ರಯುಕ್ತ ಸುವರ್ಣ ಮಹೋತ್ಸವವನ್ನು ಆಚರಿಸುವುದರ ಜೊತೆಗೆ 2022 –23ನೇ ಸಾಲಿನ 50ನೇ ಅಧಿಕಾರ ಹಸ್ತಾಂತರ ಸಮಾರಂಭವು ಈಚೆಗೆ ಬಸವೇಶ್ವರ ನಗರದ ಲಯನ್ಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರುಗಿತು.

ಅಧಿಕಾರ ಬೋಧನೆಗಾಗಿ ಆಗಮಿಸಿದ್ದ ಎಂ.ಜೆ.ಎಫ್. ಮೋನಿಕಾ ಸಾವಂತ ಅವರು ‘ಲಯನ್ಸ್‌ ಸಂಸ್ಥೆ ಇರುವುದೇ ಸಮಾಜ ಸೇವೆಗಾಗಿ. 50 ವರ್ಷದ ಇತಿಹಾಸವನ್ನು ನೋಡಿದಾಗ ಸಮಾಜದಲ್ಲಿ ಉತ್ತಮ ಸೇವೆ ಮಾಡಿದೆ. ಹಾವೇರಿ ಲಯನ್ಸ್‌ ಸಂಸ್ಥೆ, ಜನರ ಕಷ್ಟಗಳಿಗೆ ಸ್ಪಂದಿಸಿರುವುದು ಶ್ಲಾಘನೀಯ ಎಂದು ಹೇಳಿದರು. ನಂತರ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಅಧಿಕಾರ ಬೋಧನೆ ಮಾಡಿದರು.

ಲಯನ್ಸ್‌ ಕ್ಲಬ್‌ನ ಮಾಜಿ ಅಧ್ಯಕ್ಷ ವಿರೂಪಾಕ್ಷ ಹಾವನೂರ ಅವರು 2022-23ನೇ ಸಾಲಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿರೂಪಾಕ್ಷ ಜಿ. ಬಣಕಾರ ಅವರಿಗೆ ಮೋನಿಕಾ ಸಾವಂತ ಅವರ ನೇತೃತ್ವದಲ್ಲಿ ಅಧಿಕಾರ ಹಸ್ತಾಂತರಿಸಿದರು. ಗೌರವ ಕಾರ್ಯದರ್ಶಿಯಾಗಿ ಎ.ಎಚ್. ಕಬ್ಬಿಣಕಂತಿಮಠ ಮತ್ತು ಆರ್.ಆರ್. ಪಾಟೀಲ ಖಜಾಂಚಿಯಾಗಿ ಆಯ್ಕೆಯಾಗಿ ಅಧಿಕಾರ ವಹಿಸಿಕೊಂಡರು.

ADVERTISEMENT

‘ಸಮಾಜದ ಪ್ರಗತಿಗೆ ಶ್ರಮಿಸುವುದು, ಅದಕ್ಕಾಗಿ ಸಂಸ್ಥೆಯಿಂದ ಹೊಸ ಹೊಸ ಯೋಜನಗಳನ್ನು ರೂಪಿಸಿ, ಸಂಸ್ಥೆಯ ಏಳಿಗೆಯೇ ನಮ್ಮ ಧ್ಯೇಯ’ ಎಂದು ನೂತನ ಅಧ್ಯಕ್ಷ ವಿರೂಪಾಕ್ಷ ಬಣಕಾರ ಅವರು ಉತ್ಸಾಹದಿಂದ ನುಡಿದರು.

ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಹಿರಿಯ ಸದಸ್ಯರ ಕಾರ್ಯ ವೈಖರಿಯನ್ನು ಸ್ಮರಿಸುತ್ತ ಡಾ.ಹೊರಡಿ ಹಾಗೂ ಡಾ.ಗೊಡ್ಡೆಮ್ಮಿ ಅವರನ್ನು ವೇದಿಕೆಯ ಗಣ್ಯರು ಸನ್ಮಾನಿಸಿದರು.

ಸುಭಾಸ ಹುಲ್ಯಾಳದ ವರದಿ ವಾಚನ ಮಾಡಿದರೆ, ಹಿರಿಯ ಸದಸ್ಯರಾದ ಎಸ್.ಎಸ್. ಮುಷ್ಠಿ ಮತ್ತು ನಿತಿನ್ ಹೊರಡಿ ಅವರು ಪರಿಚಯ ಭಾಷಣ ಮಾಡಿದರು. ಕಾರ್ಯದರ್ಶಿ ಎ.ಎಚ್. ಕಬ್ಬಿಣಕಂತಿಮಠ ಎಲ್ಲರನ್ನು ವಂದಿಸಿದರೆ, ಎಸ್. ಎಚ್. ಕಬ್ಬಿಣಕಂತಿಮಠ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.