ADVERTISEMENT

ಹಾವೇರಿ | ಸಾಲ ಕಿರುಕುಳ: ನದಿಗೆ ಹಾರಿದ್ದ ಮಹಿಳೆಯ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 18:57 IST
Last Updated 31 ಜುಲೈ 2025, 18:57 IST
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ನೀಟಪಳ್ಳಿ ಬಳಿ ತುಂಗಭದ್ರಾ ನದಿಯ ಮಧ್ಯದಲ್ಲಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಲು ದೋಣಿಯಲ್ಲಿ ತೆರಳಿದ ಸಿಬ್ಬಂದಿ
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ನೀಟಪಳ್ಳಿ ಬಳಿ ತುಂಗಭದ್ರಾ ನದಿಯ ಮಧ್ಯದಲ್ಲಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಲು ದೋಣಿಯಲ್ಲಿ ತೆರಳಿದ ಸಿಬ್ಬಂದಿ   

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ನೀಟಪಳ್ಳಿ ಬಳಿ ಗುರುವಾರ ತುಂಗಭದ್ರಾ ನದಿ ಮಧ್ಯೆ ನೀರಿನಲ್ಲಿ ಸಿಲುಕಿ ರಕ್ಷಣೆಗೆ ಕೂಗಾಡುತ್ತಿದ್ದ ಮಹಿಳೆಯನ್ನು ಪೊಲೀಸರು–ಅಗ್ನಿಶಾಮದ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

‘ಹಿರೇಕೆರೂರು ಠಾಣೆ ವ್ಯಾಪ್ತಿಯ ನಿವಾಸಿ ರೂಪಾ, ನದಿಯ ಮಧ್ಯೆ ಸಿಲುಕಿದ್ದರು. ದೋಣಿ ಮೂಲಕ ಕಾರ್ಯಾಚರಣೆ ನಡೆಸಿ, ಅವರನ್ನು ರಕ್ಷಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ರೂಪಾ ಕೆಲವರ ಬಳಿ ಸಾಲ ಮಾಡಿದ್ದು, ಮರಳಿಸುವಂತೆ ಸಾಲಗಾರರು ಬೆನ್ನುಬಿದ್ದಿದ್ದರು. ಬುಧವಾರ ರಾತ್ರಿ 12ರ ಸುಮಾರಿಗೆ ನಂದಿಗುಡಿ ಬಳಿ ಮೇಲ್ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅಲ್ಲಿಂದ 2 ಕಿ.ಮೀ.ವರೆಗೂ ನೀರಿನಲ್ಲಿ ಸಾಗಿ, ಗಿಡಗಂಟಿಗಳಲ್ಲಿ ಸಿಲುಕಿದ್ದರು’ ಎಂದು ಹೇಳಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.