
ಗುತ್ತಲ (ಹಾವೇರಿ ಜಿಲ್ಲೆ): ಸಮೀಪದ ಹಾವನೂರ ಗ್ರಾಮದ ಮೈಲಾರಲಿಂಗೇಶ್ವರನ ಕಾರಣಿಕೋತ್ಸವ ಮಂಗಳವಾರ ನಡೆಯಿತು. ಗೋರವಯ್ಯ ಆನಂದ ಬಿಲ್ಲರ ಬಿಲ್ಲನ್ನೇರಿ, ‘ಬಿತ್ತಿ ಬೆಳೆದ ಕೈ ಬಂಗಾರದ ಖಡ್ಗ ತೋಟ್ಟಿತಲೇ ಪರಾಕ್’ ಎಂದು ನುಡಿದರು.
ಬಿಲ್ಲನ್ನೇರುವಾಗ ಅವಸರ ಮಾಡಿದ ಕಾರಣ ಕಾಲು ಜಾರುವ ಭಯದಲ್ಲಿ ಗೋರವಯ್ಯ ಬಿಲ್ಲನ್ನು ಅರ್ಧಕ್ಕೆ ಮಾತ್ರ ಏರಿ ಕಾರಣಿಕ ನುಡಿದರು.
‘ರೈತರು ಬೆಳೆದ ಬೆಳೆಗೆ ಉತ್ತಮ ದರ ಸಿಗಬಹುದು. ಉತ್ತಮ ಮಳೆ ಆಗಬಹುದು’ ಎಂದು ಭಕ್ತರು ಹರ್ಷ ವ್ಯಕ್ತಪಡಿಸಿದರು. ಕಾರಣಿಕ ನುಡಿಯಲ್ಲಿ ಉತ್ತಮ ಸಂದೇಶ ಅಡಗಿದೆ ಎಂದು ಅಭಿಪ್ರಾಯಪಟ್ಟರು.
ಮೈಲಾರಲಿಂಗೇಶ್ವರ ಕಾರಣಿಕ ಇಂದು: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಸುಕ್ಷೇತ್ರದಲ್ಲಿ ಬುಧವಾರ (ಫೆ.4) ಸಂಜೆ 5.30ಕ್ಕೆ ಮೈಲಾರಲಿಂಗೇಶ್ವರ ಸ್ವಾಮಿ ಕಾರಣಿಕೋತ್ಸವ ಜರುಗಲಿದೆ. ಸ್ವಾಮಿಯ ಭವಿಷ್ಯವಾಣಿ ಆಲಿಸಲು ಲಕ್ಷಾಂತರ ಭಕ್ತರು ಕಾತುರರಾಗಿದ್ದಾರೆ.
ಕಾರಣಿಕೋತ್ಸವದ ಸಿದ್ಧತೆ ಪೂರ್ಣಗೊಂಡಿವೆ. ಗೊರವಪ್ಪ ನುಡಿಯುವ ಸ್ವಾಮಿಯ ಕಾರ್ಣಿಕ ನುಡಿ ಸ್ಪಷ್ಟವಾಗಿ ಕೇಳಿಸುವಂತೆ ತಂತ್ರಜ್ಞಾನ ಆಧಾರಿತ ಧ್ವನಿ ಮುದ್ರಿಕೆ, ಧ್ವನಿವರ್ಧಕ ಅಳವಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.