ADVERTISEMENT

‘ಮಾರ್ಕ್ಸ್ ಬಿತ್ತಿದ ಬೀಜ ವಿಶ್ವದೆಲ್ಲೆಡೆ ಹರಡಿದೆ’

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 15:26 IST
Last Updated 14 ಸೆಪ್ಟೆಂಬರ್ 2024, 15:26 IST
ರಾಣೆಬೆನ್ನೂರಿನ ಗೌರಿಶಂಕನಗರದ ನಿವೃತ್ತ ನೌಕರರ ಭವನವದಲ್ಲಿ ಎಸ್‌ಎಫ್‌ಐ 9ನೇ ತಾಲ್ಲೂಕು ಸಮ್ಮೇಳನದಲ್ಲಿ ವನಸಿರಿ ಸಂಸ್ಥಾಪಕ ನಿರ್ದೇಶಕ ಎಸ್‌.ಡಿ.ಬಳಿಗಾರ ಮಾತನಾಡಿದರು
ರಾಣೆಬೆನ್ನೂರಿನ ಗೌರಿಶಂಕನಗರದ ನಿವೃತ್ತ ನೌಕರರ ಭವನವದಲ್ಲಿ ಎಸ್‌ಎಫ್‌ಐ 9ನೇ ತಾಲ್ಲೂಕು ಸಮ್ಮೇಳನದಲ್ಲಿ ವನಸಿರಿ ಸಂಸ್ಥಾಪಕ ನಿರ್ದೇಶಕ ಎಸ್‌.ಡಿ.ಬಳಿಗಾರ ಮಾತನಾಡಿದರು   

ರಾಣೆಬೆನ್ನೂರು: ಎಸ್‌ಎಫ್‌ಐ ಚಳುವಳಿ ಮಾರ್ಕ್ಸ್‌ ಬಿತ್ತಿದ ಬೀಜವು ವಿಶ್ವದಲ್ಲೆಡೆ ಹರಡಿದೆ ಎಂಬುದಕ್ಕೆ ಎಸ್ಎಫ್ಐ ಸಂಘಟನೆ ಸಾಕ್ಷಿಯಾಗಿದೆ ಎಂದು ಯುವಕವಿ, ಸಾಹಿತಿ ದೇವರಾಜ ಹುಣಸಿಕಟ್ಟಿ ಹೇಳಿದರು.

ಇಲ್ಲಿನ ಗೌರಿಶಂಕರ ನಗರದ ನಿವೃತ್ತ ನೌಕರರ ಭವನದಲ್ಲಿ ಶುಕ್ರವಾರ ಸರ್ಕಾರಿ ಶಾಲಾ-ಕಾಲೇಜು, ಹಾಸ್ಟೆಲ್ ಬಲವರ್ಧನೆ, ಸೌಹಾರ್ದ, ಶಿಕ್ಷಣದ ವ್ಯಾಪಾರೀಕಣ ವಿರೋಧಿಸಿ, ತಾಲ್ಲೂಕಿನ ಶೈಕ್ಷಣಿಕ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಒತ್ತಾಯಿಸಿ ಎಸ್‌ಎಫ್‌ಐ ತಾಲ್ಲೂಕು ಸಮಿತಿ ಆಯೋಜಿಸಿದ 9ನೇ ತಾಲ್ಲೂಕು ಸಮ್ಮೇಳನದಲ್ಲಿ ಅವರು ಮಾತನಾಡಿದರು.

ತತ್ವ, ಆದರ್ಶ ತುಂಬುವುದು ಮಾತೃ ಹೃದಯ ಮಾಡುವ ಕೆಲಸ. ಅಂತಹ ಕಾರ್ಯವನ್ನು ಎಸ್ಎಫ್ಐ ಸಂಘಟನೆ ಸಮಾಜದಲ್ಲಿ ಮಾಡುತ್ತಿದೆ ಎಂಬ ಹೆಮ್ಮೆ ಇದೆ. ಎಲ್ಲಿ ಅನ್ಯಾಯ ನಡೆಯುತ್ತದೆ. ಅಲ್ಲಿ ಸರ್ಕಾರದ ಅಧಿಕಾರಶಾಹಿ ವರ್ಗವನ್ನು ಪ್ರಶ್ನೆ ಮಾಡುವ ಮೂಲಕ ವಿದ್ಯಾರ್ಥಿ ಸಮುದಾಯಕ್ಕೆ ನ್ಯಾಯವನ್ನು ಕೊಡಿಸುವ ಕಾರ್ಯವನ್ನು ಎಸ್ಎಫ್ಐ ಮಾಡುತ್ತಿದೆ. ಹಾಗಾಗಿ ನೀವು ಅಪಾರ ಸಂಖ್ಯೆಯಲ್ಲಿ ಸಂಘಟನೆಯೊಂದಿಗೆ ನಿಲ್ಲಬೇಕು. ಸರ್ಕಾರವನ್ನು ಎಚ್ಚರಿಸುವ ಹೋರಾಟ ಹೀಗೆ ಮುಂದುವರೆಯಲ್ಲಿ ಎಂದು ಶುಭ ಕೋರಿದರು.

ADVERTISEMENT

ವನಸಿರಿ ಸಂಸ್ಥಾಪಕ ಎಸ್.ಡಿ.ಬಳಿಗಾರ ಮಾತನಾಡಿ, ಕಾರ್ಮಿಕ ಮಕ್ಕಳು ಸೌಲಭ್ಯಗಳಿಂದ ವಂಚಿತರಾಗುವುದು ಸರಿಯಲ್ಲ. ಎಸ್ಎಫ್ಐ ಸಂಘಟನೆಯೊಂದಿಗೆ ವನಸಿರಿ ಸಂಸ್ಥೆ ಸದಾಕಾಲವೂ ಜೊತೆಯಾಗಿರುತ್ತದೆ ಎಂದರು.

ಉಪನ್ಯಾಸಕ ಹೊನ್ನಪ್ಪ ಹೊನ್ನಪ್ಪನವರ ಮಾತನಾಡಿ, ಸಂಘಟನೆ ಯಾಕೆ ಕಟ್ಟಬೇಕು ಎಂದರೆ ಧೈರ್ಯ ಕೊಡುವುದಲ್ಲದೇ ಒಂದು ಶಕ್ತಿಯಾಗಿ ನಿಲ್ಲತ್ತದೆ ಆದರಿಂದ ಎಸ್ಎಫ್ಐ ಸಂಘಟನೆ ಸೇರಬೇಕು. ಯುವಜನತೆ ಕುವೆಂಪು ಅವರ ಕರೆಯಂತೆ ಜಾತಿ, ಧರ್ಮ ಹೊಡೆದಾಟ ಬಿಟ್ಟು ವಿಶ್ವಮತ ಸಂದೇಶ ಅರಿಯಬೇಕು ಎಂದರು.

ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ತಾಲ್ಲೂಕು ಸಮಿತಿ ಅಧ್ಯಕ್ಷ ಶ್ರೀಧರ ಸಿ ಅಧ್ಯಕ್ಷತೆ ವಹಿಸಿದ್ದರು. ಕೀರ್ತನಾ.ಎಚ್, ಶೃತಿ.ಆರ್.ಎಂ, ಸಿಂಚನ ಮಾಗನೂರ, ನೀಲಪ್ಪ ಬಸಣ್ಣನವರ, ಸಾಕಿನ್‌ ಉಕ್ಕುಂದ, ಬಸವರಾಜ ಕೊಣಸಾಲಿ, ಮಹೇಶ್ ಮರೋಳ, ಗಜೇಂದ್ರ ಆರೇರ್, ಕರಿಯಪ್ಪ ಭರಡಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.