ರಾಣೆಬೆನ್ನೂರು: ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಅಹ್ಯಾತವಾಗಿ ನಡೆಯುತ್ತಿರುವ ಮಟಕಾ ದಂಧೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಕರವೇ ಪದಾಧಿಕಾರಿಗಳು ತಾಲ್ಲೂಕಿನ ಕೊಡಿಯಾಲ ಹೊಸಪೇಟೆ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು ನಂತರ ಕೊಡಿಯಾಲ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಮೇಶ ನಲ್ಲೂರು ಅವರಿಗೆ ಮನವಿ ಸಲ್ಲಿಸಿದರು.
ಕರವೇ ತಾಲ್ಲೂಕು ಘಟಕದ ಅಧ್ಯಕ್ಷ ಕೊಟ್ರೇಶ ಶಿವಪುತ್ರಪ್ಪ ಗುತ್ತೂರ ಮಾತನಾಡಿ, ಪೋಲೀಸ್ ಬೀಟ್ ವ್ಯವಸ್ಥೆ, ಗಸ್ತು ತಿರುಗುವುದು ಇದ್ದು ಇಲ್ಲದಂತಾಗಿದೆ. ಬೆರಳೆಣಿಕೆಯಷ್ಟು ಕೇಸು ಹಾಕಿ ಕೈತೊಳೆದುಕೊಳ್ಳುತ್ತಿದ್ದಾರೆ ಹೊರತು, ಮಟ್ಕಾದಂಧೆಯನ್ನು ಸಂಪೂರ್ಣವಾಗಿ ಮಟ್ಟಾ ಹಾಕುತ್ತಿಲ್ಲ. ಕೈ ಚೀಟಿ ಬದಲಾಗಿ ಮಟ್ಕಾ ದಂಧೆಯನ್ನು ಮೊಬೈಲ್ ವಾಟ್ಸ್ ಆಪ್ ಮೂಲಕ ಬರೆದುಕೊಳ್ಳುತ್ತಿದ್ದರಿಂದ ಈಗ ಹೈಟೆಕ್ ಸ್ಪರ್ಶ ಪಡೆದುಕೊಂಡಿದೆ ಎಂದರು. ಪಂಚಾಯಿತಿ ಸದಸ್ಯರಾದ ಪ್ರಭು ಪೂಜಾರ, ಚೇತನ್.ಮ.ಪೂಜಾರ, ಹಾಲೇಶಪ್ಪ ಸಾಲಕಟ್ಟಿ ಹಾಗೂ ಜಗದೀಶ ಪೂಜಾರ ಹಾಗೂ ಬಸವರಾಜ, ಚಂದ್ರಶೇಖರ, ಹಾಲೇಶ ಕರಡಪ್ಪನವರ, ರಂಜಾನ್‌ಸಾಬ್, ಹನುಮಂತಪ್ಪ ಮೇಡ್ಲೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.