ತಡಸ: ಹತ್ತಿರದ ಕುನ್ನೂರ ಗ್ರಾಮದಲ್ಲಿ ಬುಧವಾರ ಅತ್ಯಂತ ವಿಜೃಂಭಣೆಯಿಂದ ಮೊಹರಂ ಕೊನೆಯ ದಿನ ದೇವರನ್ನು ಹೊಳೆಗೆ ಕಳಿಸಲಾಯಿತು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಮಕ್ಕಳ ಕೋಲಾಟ ನೃತ್ಯ ನೋಡುಗರನ್ನು ಸೆಳೆಯಿತು. ಹಿಂದೂ ಯುವಕರೇ ಪಂಜಾಗಳನ್ನು ಹಿಡಿದು ಡೋಲಿಯನ್ನು ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಗ್ರಾಮಸ್ಥರು ಪಾಂಜಾಗಳಿಗೆ ವಿಶೇಷ ಪೂಜೆ ಮತ್ತು ನೈವೇದ್ಯ ಸಲ್ಲಿಸಿದರು.
ಮೌಲಾ ಅಲಿ ಬೀಬಿ ಫಾತೀಮಾ ಹುಸೇನ ದೇವರ ಪಂಜಾಗಳಿಗೆ ಗ್ರಾಮಸ್ಥರು ವಿಶೇಷ ಪೂಜೆ ನೆರವೇರಿಸಿದರು. ಹಾಗೂ ಕೆಂಡ ಹಾಯುವ ಕಾರ್ಯಕ್ರಮ ಪವಾಡ ಜರುಗಿದವು. ಎಲ್ಲ ಸಮುದಾಯದ ಜನರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಹಿಂದೂಗಳೇ ಇರುವ ಅಡವಿ ಸೋಮಾಪೂರ ಹಾಗೂ ಶ್ಯಾಡಂಬಿ ಗ್ರಾಮದಲ್ಲಿ ಗ್ರಾಮಸ್ಥರು ಅತ್ಯಂತ ಶ್ರದ್ಧಾ–ಭಕ್ತಿಯಿಂದ ಅಗ್ನಿ ಹಾಯುವ ಡೋಲಿ ಹೊತ್ತುಕೊಂಡು ಆಚರಣೆ ಸಲ್ಲಿಸಿ ಸೌಹಾರ್ದತೆ ಮೆರೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.