ADVERTISEMENT

ಮೂರ್ತಿಗೆ ಹಾಲೆರೆಯುವ ಬದಲು ಮಕ್ಕಳಿಗೆ ಹಾಲು ನೀಡಿರಿ: ಮಹಾಂತ ಸ್ವಾಮೀಜಿ

ಮೌಢ್ಯಾಚರಣೆ ಕುರಿತು ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 6:00 IST
Last Updated 14 ಆಗಸ್ಟ್ 2021, 6:00 IST
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿಯಲ್ಲಿನ ದೇಸಾಯಿಮಠದಲ್ಲಿ ಶುಕ್ರವಾರ ಮಹಾಂತ ಸ್ವಾಮೀಜಿ ನಾಗಪಂಚಮಿ ಅಂಗವಾಗಿ ಮಕ್ಕಳಿಗೆ ಹಾಲು ವಿತರಿಸಿದರು
ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿಯಲ್ಲಿನ ದೇಸಾಯಿಮಠದಲ್ಲಿ ಶುಕ್ರವಾರ ಮಹಾಂತ ಸ್ವಾಮೀಜಿ ನಾಗಪಂಚಮಿ ಅಂಗವಾಗಿ ಮಕ್ಕಳಿಗೆ ಹಾಲು ವಿತರಿಸಿದರು   

ಶಿಗ್ಗಾವಿ: ಪ್ರತಿ ಹಬ್ಬ ಹರಿದಿನ ಆಚರಣೆಗೆ ಹಿನ್ನೆಲೆ ಇದ್ದು, ಅವುಗಳ ಮಹತ್ವ ತಿಳಿದು ಆಚರಣೆ ಮಾಡುವುದು ಅವಶ್ಯವಾಗಿದೆ. ಹೀಗಾಗಿ ನಾಗಪಂಚಮಿ ಹಬ್ಬದಲ್ಲಿ ಕಲ್ಲಿನ ನಾಗರ ಮೂರ್ತಿಗೆ ಹಾಲೆರೆಯುವ ಬದಲಾಗಿ ಮಕ್ಕಳಿಗೆ ಹಾಲು ವಿತರಣೆ ಮಾಡಿ ಎಂದು ದೇಸಾಯಿಮಠದ ಮಹಾಂತ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿಯಲ್ಲಿನ ದೇಸಾಯಿಮಠದಲ್ಲಿ ಶುಕ್ರವಾರ ನಾಗಪಂಚಮಿ ಅಂಗವಾಗಿ ಮಕ್ಕಳಿಗೆ ಹಾಲು ವಿತರಣೆ ಹಾಗೂ ಮೌಢ್ಯಾಚರಣೆ ಕುರಿತು ಜಾಗೃತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕಲ್ಲಿನ ನಾಗರ ಮೂರ್ತಿಗೆ ಹಾಲು ಎರೆದರೆ ಯಾವುದೇ ಪುಣ್ಯಫಲ ದೊರೆಯಲಾರದು. ಅದೇ ಹಾಲನ್ನು ಮಕ್ಕಳಿಗೆ ನೀಡುವ ಪುಣ್ಯ ಪಡೆಯಬಹುದು. ಮಕ್ಕಳೇ ದೇವರೆಂಬ ಭಾವನೆ ಬೆಳೆಯಬೇಕು. ಪೌಷ್ಟಿಕ ಆಹಾರ ಮಕ್ಕಳಿಗೆ ನೀಡಿದಾಗ ರೋಗರುಜಿನಗಳಿಂದ ಕಾಪಾಡಿಕೊಳ್ಳಲು ಸಾಧ್ಯವಿದೆ. ಋತುಮಾನಗಳ ತಕ್ಕಂತೆ ನಾಡಿನಲ್ಲಿ ಹಲವು ಹಬ್ಬ ಹರಿದಿನಗಳನ್ನು ಪರಂಪರಾಗತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಹಬ್ಬದ ಹಿನ್ನೆಲೆ ಅರಿಯಬೇಕು. ಮೌಢ್ಯಗಳು ದೊರಾಗಬೇಕು ಎಂದರು.

ADVERTISEMENT

ಮುಖಂಡರಾದ ರಾಯಪ್ಪ ಕಾಶೆಟ್ಟಿ, ಸಂಗಪ್ಪ ಗಂಗನೂರ, ಪವನ ಬಳ್ಳಾರಿ, ಕಿರಣ ಕುರಿ, ಯಲ್ಲಪ್ಪ ಕುರಿ, ಭೀರಪ್ಪ ಗಾಳೆಮ್ಮನವರ, ನಂದೇಪ್ಪ ಕುರಿ, ಬಸಪ್ಪ ನಿರೋಳ್ಳಿ, ಮಾಲತೇಶ ಆಲದಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.