ಹಿರೇಕೆರೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಗುರುವಾರ ನಾಗರ ಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಕೆಲವು ಕಡೆಗಳಲ್ಲಿ ಹುತ್ತಕ್ಕೆ ಹಾಲೆರೆದರು, ಕೆಲವರು ಕಲ್ಲು ನಾಗರ ಮೂರ್ತಿಗೆ ಹಾಲು ಹಾಕಿದರು, ಮನೆಯಲ್ಲಿ ಮಣ್ಣಿನ ನಾಗಪ್ಪನನ್ನು ನಿರ್ಮಿಸಿ ಹಾಲು ಎರೆದು, ಗ್ರಾಮದ ಎಲ್ಲ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಗೆ ಬಗೆಯ ಉಂಡಿಗಳನ್ನು ತಯಾರಿಸಿ ನೈವೇಧ್ಯ ಮಾಡಿ ಹಬ್ಬ ಆಚರಿಸಿದರು. ಮಹಿಳೆಯರು, ಮಕ್ಕಳು ಹೊಸ ಬಟ್ಟೆ ತೊಟ್ಟು ಜೋಕಾಲಿ ಜೀಕಿ ಹರ್ಷದಿಂದ ನಲಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.