ADVERTISEMENT

ಹಾವೇರಿ: ಹಾಳಾಗಿದ್ದ ನಾಮಫಲಕಕ್ಕೆ ಹೊಸರೂಪ

​ಪ್ರಜಾವಾಣಿ ವಾರ್ತೆ
Published 23 ಜೂನ್ 2020, 13:59 IST
Last Updated 23 ಜೂನ್ 2020, 13:59 IST
ಹಾವೇರಿ ಜಿಲ್ಲಾಡಳಿತ ಭವನದಲ್ಲಿ ವಿವಿಧ ಇಲಾಖೆಗಳ ಹೆಸರು ಮತ್ತು ಕಟ್ಟಡ ಸಂಖ್ಯೆಯನ್ನು ಸೂಚಿಸುವ ನಾಮಫಲಕ ಹಾಳಾಗಿದ್ದ ದೃಶ್ಯ
ಹಾವೇರಿ ಜಿಲ್ಲಾಡಳಿತ ಭವನದಲ್ಲಿ ವಿವಿಧ ಇಲಾಖೆಗಳ ಹೆಸರು ಮತ್ತು ಕಟ್ಟಡ ಸಂಖ್ಯೆಯನ್ನು ಸೂಚಿಸುವ ನಾಮಫಲಕ ಹಾಳಾಗಿದ್ದ ದೃಶ್ಯ   

ಹಾವೇರಿ: ದೇವಗಿರಿ ಸಮೀಪದ ಜಿಲ್ಲಾಡಳಿತ ಭವನದ ಆವರಣದಲ್ಲಿ ಹಾಳಾಗಿದ್ದ ನಾಮಫಲಕಗಳಿಗೆ, ಹೊಸ ಬಣ್ಣ ಬಳಿದು, ಇಲಾಖೆಗಳ ಹೆಸರುಗಳನ್ನು ಬರೆಸಲಾಗಿದೆ.

ಇಲಾಖೆಗಳ ಹೆಸರುಗಳು ಅಳಿಸಿ ಹೋದ ಕಾರಣ, ಕಚೇರಿಗಳನ್ನು ಹುಡುಕುಲು ಸಾರ್ವಜನಿಕರು ಮತ್ತು ರೈತರು ಪರದಾಡುವಂತಾಗಿತ್ತು. ಜಿಲ್ಲಾಡಳಿತ ಭವನದ ಯಾವ ಬ್ಲಾಕ್‌ನಲ್ಲಿ ಯಾವ ಕಚೇರಿ ಇದೆ ಎಂಬುದೇ ತಿಳಿಯುತ್ತಿರಲಿಲ್ಲ. ಈಗ ಹೊಸದಾಗಿ ಇಲಾಖೆ ಹೆಸರು ಬರೆದಿರುವುದರಿಂದ ಸ್ಪಷ್ಟವಾಗಿ ಕಚೇರಿಗಳ ವಿವರ ಸಿಗುತ್ತಿದೆ ಎಂದು ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಇಲಾಖೆಗೆಳ ನಾಮಫಲಕ ಹಾಳಾಗಿರುವ ಬಗ್ಗೆ ಜೂನ್‌ 3ರಂದು ‘ಪ್ರಜಾವಾಣಿ’ಯಲ್ಲಿ ಚಿತ್ರಸುದ್ದಿ ಪ್ರಕಟವಾಗಿತ್ತು. ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಆವರಣದಲ್ಲಿರುವ ಎಲ್ಲ ಇಲಾಖೆಗಳ ನಾಮಫಲಕಕ್ಕೆ ಹೊಸರೂಪ ನೀಡುವಂತೆ ಸೂಚನೆ ನೀಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.