ರಾಣೆಬೆನ್ನೂರು: ತಾಲ್ಲೂಕಿನ ಮಾಳನಾಯಕನಹಳ್ಳಿ ಗ್ರಾಮದಲ್ಲಿ ಸೋಮವಾರ ನೀಲಕಂಠೇಶ್ವರ ದೇವರ ಪಲ್ಲಕ್ಕಿ ಉತ್ಸವ ಹಾಗೂ ಗುಗ್ಗಳ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಬ್ರಾಹ್ಮೀ ಮುಹೂರ್ತದಲ್ಲಿ ನೀಲಕಂಠೇಶ್ವರ, ಪಾರ್ವತಿ ದೇವಿ, ಬಸವಣ್ಣ ಹಾಗೂ ಗಣೇಶ ಮೂರ್ತಿಗಳಿಗೆ ಮಹಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಣಕೂರು, ಮಾಳನಾಯಕನಹಳ್ಳಿ ಹಾಲಸ್ವಾಮಿ ಮಠದ ಮಲ್ಲಿಕಾರ್ಜನ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಉಕ್ಕಡಗಾತ್ರಿ ರೇವಣಸಿದ್ದಯ್ಯ ಸ್ವಾಮೀಜಿ ಉಪಸ್ಥಿತಿಯಲ್ಲಿ ಭಕ್ತರು ಹಾಗೂ ಪುರವಂತರ ತಂಡದವರು ಗ್ರಾಮದಲ್ಲಿ ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಸಲು ಹಾಗೂ ಬರ ನಿವಾರಣೆಗೆ ದೇವಸ್ಥಾನದ ಆವರಣದಲ್ಲಿ ಪೂಜೆ ಸಲ್ಲಿದರು. ಪಲ್ಲಕ್ಕಿ ಉತ್ಸವ ನಡೆಯಿತು. ಹರಿಹರದ ನಾಗರಾಜಚಾರಿ, ವೀರಭದ್ರಚಾರಿ ಹಾಗೂ ಸಂಗಡಿಗರು ಪುರವಂತಿಕೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.