ADVERTISEMENT

ರಾಣೆಬೆನ್ನೂರು: ‘ಸಾವಯವ ಗೊಬ್ಬರದ ಬಳಕೆ ಹೆಚ್ಚಿಸಿ’

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 2:13 IST
Last Updated 6 ಡಿಸೆಂಬರ್ 2025, 2:13 IST
ರಾಣೆಬೆನ್ನೂರು ತಾಲ್ಲೂಕಿನ ಕಾಕೋಳ ಗ್ರಾಮದ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಮಣ್ಣು ದಿನಾಚರಣೆಗೆ ರೈತರು ಹಾಗೂ ಅಧಿಕಾರಿಗಳು ಚಾಲನೆ ನೀಡಿದರು
ರಾಣೆಬೆನ್ನೂರು ತಾಲ್ಲೂಕಿನ ಕಾಕೋಳ ಗ್ರಾಮದ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಮಣ್ಣು ದಿನಾಚರಣೆಗೆ ರೈತರು ಹಾಗೂ ಅಧಿಕಾರಿಗಳು ಚಾಲನೆ ನೀಡಿದರು   

ರಾಣೆಬೆನ್ನೂರು: ಮಣ್ಣು ಮತ್ತು ನೀರು ಪ್ರತಿ ಜೀವಿಗಳಿಗೆ ಅತ್ಯವಶ್ಯಕ. ಇವುಗಳ ಸಂರಕ್ಷಣೆ ಜೊತೆಗೆ ಭೂಮಿ ಫಲವತ್ತತೆ ಕಾಪಾಡಿಕೊಳ್ಳಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಎ.ಎಚ್. ಬಿರಾದಾರ ಹೇಳಿದರು.

ತಾಲ್ಲೂಕಿನ ಕಾಕೋಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಹಾವೇರಿ ಹಾಗೂ ದಿ ಫರ್ಟಿಲೈಜರ್ಸ್ ಆಂಡ್ ಕೆಮಿಕಲ್ಸ್ ಟ್ರಾವಂಕೂರ್ ಲಿ. (ಭಾರತ ಸರ್ಕಾರದ ಉದ್ಯಮ) ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಮಣ್ಣು ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಬೆಳಗಾವಿ ವಲಯ ಫ್ಯಾಕ್ಟ್ ಲಿನ ಸಹಾಯಕ ಮಹಾಪ್ರಬಂಧಕ ಜನಾರ್ಧನ ಭಟ್ ಮಾತನಾಡಿ, ಜೀವ ಮತ್ತು ಜೀವನಕ್ಕೆ ಮಣ್ಣೇ ಆಧಾರ, ಅದಕ್ಕಾಗಿ ಮಣ್ಣಿನ ಫಲವತ್ತತೆ ಮತ್ತು ಜೀವ ವೈವಿದ್ಯತೆ ಕಾಪಾಡುವುದು ಅವಶ್ಯ ಎಂದರು. 

ADVERTISEMENT

ಮಣ್ಣಿನ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುವುದು ನಮ್ಮ ಕರ್ತವ್ಯ ಹಾಗೂ ಅವೈಜ್ಞಾನಿಕ ರಾಸಾಯನಿಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆಯನ್ನು ಹಾಳು ಮಾಡುತ್ತಿದ್ದೇವೆ. ಆದ್ದರಿಂದ ಮಣ್ಣಿನ ಜೀವಂತಿಕೆಯನ್ನು ಹೆಚ್ಚಿಸಲು ಸಾವಯವ ಗೊಬ್ಬರದ ಬಳಕೆಯನ್ನು ಹೆಚ್ಚಿಸಬೇಕು ಎಂದರು.

ಕಾಕೋಳ ಗ್ರಾಮದ ಕೃಷಿಕ ಚನ್ನಬಸಪ್ಪ ಕೋಂಬಳಿ, ನಗರದ ಕೃಷಿ ಇಲಾಖೆ ಉಪನಿರ್ದೇಶಕ ಕರಿಯಲ್ಲಪ್ಪ ಕೆ. ಮಾತನಾಡಿದರು. ಶಾಲಾಮಕ್ಕಳು ಸಿರಿಧಾನ್ಯಗಳ ಮಹತ್ವದ ಕುರಿತು ವಿವಿಧ ಸಿರಿಧಾನ್ಯಗಳ ಬೆಳೆಗಳ ಚದ್ಮವೇಷ ಧರಿಸಿ ನಾಟಕದ ರೂಪದಲ್ಲಿ ಬೆಳೆಗಳ ಮಾಹಿತಿ ನೀಡಿ ರೈತರ ಗಮನ ಸೆಳೆದರು.

ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮುಖ್ಯಸ್ಥ ಎಸ್.ಡಿ. ಬಳಿಗಾರ ಹಾಗೂ ವಿಜ್ಞಾನಿಗಳಾದ ಮಹೇಶ ಕಡಗಿ, ಸಿದ್ಧಗಂಗಮ್ಮ ಕೆ.ಆರ್, ಬಸಮ್ಮ ಹಾದಿಮನಿ, ಅಕ್ಷತಾ ರಾಮಣ್ಣನವರ, ಚಂದ್ರಕಾಂತ ಕೊಟಬಾಗಿ, ಕೃಷ್ಣಾನಾಯಕ ಎಲ್, ಕಿರಣ ಎಮ್ಮಿಗನೂರ, ಬಸವರಾಜ ಯಲಿಗಾರ, ಶಿವಾನಂದ ಶಂಕರಪ್ಪ ಕಡೆಮನಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಬಸವರಾಜ ಎಲಿಗಾರ, ರಾಜುಗೌಡ ಪಾಟೀಲ, ಮಾಲತೇಶ ಶಿಡಗನಾಳ, ಭರಮಲಿಂಗಪ್ಪ ಅಸುಂಡಿ, ಜಗದೀಶ ಚಪ್ಪರದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.