ADVERTISEMENT

ಹಾವೇರಿ: ಪಾಲಿಕ್ಲಿನಿಕ್‌ಗೆ ಚಾಲನೆ ನೀಡಿದ ಶಾಸಕ ನೆಹರು ಓಲೇಕಾರ

ಉಪಕರಣಗಳ ಪೂರೈಕೆಗೆ ಸರ್ಕಾರಕ್ಕೆ ಪತ್ರ

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 13:17 IST
Last Updated 13 ಜನವರಿ 2021, 13:17 IST
ಹಾವೇರಿ ನಗರದಲ್ಲಿ ಬುಧವಾರ ಶಾಸಕ ನೆಹರು ಓಲೇಕಾರ ಅವರು ಪಾಲಿಕ್ಲಿನಿಕ್‌ ಕಟ್ಟಡವನ್ನು ಉದ್ಘಾಟಿಸಿದರು 
ಹಾವೇರಿ ನಗರದಲ್ಲಿ ಬುಧವಾರ ಶಾಸಕ ನೆಹರು ಓಲೇಕಾರ ಅವರು ಪಾಲಿಕ್ಲಿನಿಕ್‌ ಕಟ್ಟಡವನ್ನು ಉದ್ಘಾಟಿಸಿದರು    

ಹಾವೇರಿ: ‘ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಈಡೇರಿದ್ದು, ಜಿಲ್ಲಾ ಕೇಂದ್ರದಲ್ಲಿ ಹೈಟೆಕ್ ಪಾಲಿಕ್ಲಿನಿಕ್ ಆಸ್ಪತ್ರೆ ಸೇವೆಗೆ ಸಜ್ಜಾಗಿದೆ. ಎಕ್ಸರೆ ಕ್ಯಾಮೆರಾ ಸೇರಿದಂತೆ ಶಸ್ತ್ರಚಿಕಿತ್ಸೆಗೆ ಬೇಕಾದ ವಿವಿಧ ಅಗತ್ಯ ಉಪಕರಣಗಳ ಪೂರೈಕೆಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ನಗರದ ಪಾಲಿಕ್ಲಿನಿಕ್ ಆವರಣದಲ್ಲಿ ಬುಧವಾರ ನೂತನ ಪಾಲಿಕ್ಲಿನಿಕ್‌ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಜಾನುವಾರು, ಪಶು-ಪಕ್ಷಿಗಳು ಅನಾರೋಗ್ಯದಿಂದ ಬಳಲುತ್ತಿದ್ದರೆ ರೈತರು ಪಾಲಿಕ್ಲಿನಿಕ್ ಆಸ್ಪತ್ರೆಗೆ ಕರೆತಂದು ಸೂಕ್ತ ಚಿಕಿತ್ಸೆ ಕೊಡಿಸಿ ಜಾನುವಾರು ಸಂಪತ್ತನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನೂತನ ಪಾಲಿಕ್ಲಿನಿಕ್ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮೇವು ಕಟಾವು ಮಾಡುವಂತಹ ಯಂತ್ರವನ್ನು ರೈತರಿಗೆ ವಿತರಣೆ ಮಾಡಿದರು.

ADVERTISEMENT

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿ.ಪಂ.ಸದಸ್ಯ ಸಿದ್ಧರಾಜ ಕಲಕೋಟಿ, ತಾ.ಪಂ. ಅಧ್ಯಕ್ಷೆ ಕಮಲವ್ವ ಪಾಟೀಲ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ, ಪಶುಪಾಲನೆ ಮತ್ತು ಪಶುವೈದ್ಯ ಸೇವೆಗಳ (ಆಡಳಿತ) ಉಪನಿರ್ದೇಶಕ ರಾಜೀವ ಕೂಲೇರ, ಪಶು ಪಾಲನೆ ಮತ್ತು ಪಶುವೈದ್ಯ ಸೇವೆಗಳ (ಪಾಲಿಕ್ಲಿನಿಕ್) ಉಪನಿರ್ದೇಶಕ ಡಾ.ಗೋಪಿನಾಥ, ಪಶು ವೈದ್ಯಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.