ADVERTISEMENT

‘ನೇಷನ್‌ ಬಿಲ್ಡರ್‌ ಅವಾರ್ಡ್‌’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 15:05 IST
Last Updated 23 ಸೆಪ್ಟೆಂಬರ್ 2021, 15:05 IST
ಹಾವೇರಿ ನಗರದ ರೋಟರಿ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಶಿಕ್ಷಕರಿಗೆ ‘ನೇಷನ್ ಬಿಲ್ಡರ್ ಅವಾರ್ಡ್‌’ ಪ್ರಶಸ್ತಿ ಪ್ರದಾನ ಮಾಡಲಾಯಿತು 
ಹಾವೇರಿ ನಗರದ ರೋಟರಿ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಶಿಕ್ಷಕರಿಗೆ ‘ನೇಷನ್ ಬಿಲ್ಡರ್ ಅವಾರ್ಡ್‌’ ಪ್ರಶಸ್ತಿ ಪ್ರದಾನ ಮಾಡಲಾಯಿತು    

ಹಾವೇರಿ:ಸದೃಢ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ದೇಶವನ್ನು ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಶ್ರೀಮಂತಗೊಳಿಸಬಲ್ಲ ವಿದ್ಯಾರ್ಥಿಗಳನ್ನು ತಯಾರು ಮಾಡುವ ಹೊಣೆ ಶಿಕ್ಷಕರ ಮೇಲಿದೆ ಎಂದು ಚಿಂತಕಪ್ರಭಾಕರ್ ರಾವ್ ಮಂಗಳೂರು ಅಭಿಪ್ರಾಯಪಟ್ಟರು.

ನಗರದ ರೋಟರಿ ಶಾಲೆಯಲ್ಲಿ ರೋಟರಿ ಸಂಸ್ಥೆ ಹಾಗೂ ಇನ್ನರ್ ವೀಲ್ ಸಂಸ್ಥೆ ಬುಧವಾರ ಆಯೋಜಿಸಿದ್ದ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಶಿಕ್ಷಕರಿಗೆ ನೀಡುವ ‘ನೇಷನ್ ಬಿಲ್ಡರ್ ಅವಾರ್ಡ್‌’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

2021-22ನೇ ಸಾಲಿನ ‘ನೇಷನ್‌ ಬಿಲ್ಡರ್‌ ಅವಾರ್ಡ್‌’ ಅನ್ನು ಶಿಕ್ಷಕರಾದ ಶೋಭಾ ಜಾಗಟಗೇರಿ, ಜಗದೀಶ ಚೌಟಗಿ, ಭುವನೇಶ್ವರಿ ಹಳೆಮನಿ, ಆರ್.ಜಿ ನಾಡಿಗೇರ, ಗೋವಿಂದ್ ರಾಜ್ ಕಡಕೋಳ, ಸೋಮಶೇಖರ ಮೆಹುರ್, ಮಂಜುಳಾ ಜಿ. ಬಂತಿ, ಬಸವರಾಜ ಕೆ. ಬತ್ತೂರ, ರೇಣುಕಾ ಗುಂಜಾಳ, ವಿಜಯ್ ಶೆಟ್ಟಿ, ಲತಾ ವಿ. ಹಿರೇಮಠ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.

ADVERTISEMENT

ರೋಟರಿ ಸಂಸ್ಥೆಯ ಅಸಿಸ್ಟೆಂಟ್ ಗವರ್ನರ್‌ ಶರತ್ ಮಲ್ಲನಗೌಡರ್ ಪ್ರಾಸ್ತವಿಕವಾಗಿ ಮಾತನಾಡಿದರು.ಇನ್ನರ್ ವೀಲ್ ಅಧ್ಯಕ್ಷ ರೇಖಾ ಯಡ್ರಾಮಿ, ಕಾರ್ಯದರ್ಶಿ ರೇಷ್ಮಾ ಮುಷ್ಟಿ, ರೋಟ್ರಾಕ್ಟ್ ಅಧ್ಯಕ್ಷರಾದ ಕಿರಣ್ ಕೋಟೂರ್, ಕಾರ್ಯದರ್ಶಿ ಉಜ್ವಲ್ ಹಿರೇಗೌಡರ್ ಇದ್ದರು.ದಯಾನಂದ್ ಯಡ್ರಾಮಿ ಸ್ವಾಗತಿಸಿದರು. ಎಸ್.ಎ. ವಜ್ರಕುಮಾರ್ ನಿರೂಪಿಸಿದರು.ಕಾರ್ಯದರ್ಶಿ ವೀರೇಶ್ ಪಾಟೀಲ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.