ADVERTISEMENT

ರಾಣೆಬೆನ್ನೂರು: 80 ಮೆಟ್ರಿಕ್‌ ಟನ್‌ ಮರಳು ವಶ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 15:46 IST
Last Updated 9 ಫೆಬ್ರುವರಿ 2024, 15:46 IST

ರಾಣೆಬೆನ್ನೂರು: ತಾಲ್ಲೂಕಿನ ಹೀಲದಹಳ್ಳಿ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಸಂಗ್ರಹಿಸಿದ್ದ 80 ಮೆಟ್ರಿಕ್‌ ಟನ್‌ ಮರಳನ್ನು ಕಂದಾಯ ಇಲಾಖೆ, ಪೊಲೀಸ್‌ ಇಲಾಖೆ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು  ವಶಪಡಿಸಿಕೊಂಡಿದ್ದಾರೆ.

ಕಂದಾಯ ನಿರೀಕ್ಷಕ ವಾಗೀಶ ಮಳೇಮಠ, ಗ್ರಾಮ ಆಡಳಿತ ಅಧಿಕಾರಿ ಕಿರಣ ಕುರುವತ್ತಿ, ರಾಮು ಆಲದಕಟ್ಟಿ ಹಾಗೂ ಪೊಲೀಸ್‌ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಬೈಕ್‌ ಅಪಘಾತ

ADVERTISEMENT

ರಾಣೆಬೆನ್ನೂರು: ಪಟ್ಟಣದ ಮಾಗೋಡು ರಸ್ತೆಯಲ್ಲಿ ಬೈಕ್‌ ಉರುಳಿಬಿದ್ದ ಪರಿಣಾಮ ಹಿಂಬದಿ ಸವಾರರೊಬ್ಬರು ಮೃತಪಟ್ಟಿದ್ದಾರೆ.

ಸರೋಜಮ್ಮ ನೇತಾಜಿ ಬೆನ್ನೂರ (59) ಮೃತರು. ಉಮಾಶಂಕರ ನಗರದ ನಿವಾಸಿ ಸಂತೋಷ ನೇತಾಜಿ ಬೆನ್ನೂರು ಅವರು ತಾಯಿಯನ್ನು ಬೈಕಿನಲ್ಲಿ ಕೂರಿಸಿಕೊಂಡು ದಾವಣಗೆರೆಯಿಂದ ಪಟ್ಟಣಕ್ಕೆ ಬರುವಾಗ ಘಟನೆ ನಡೆದಿದೆ. ನಾಯಿ ಬೈಕ್‌ಗೆ ಅಡ್ಡಬಂದಿದ್ದರಿಂದ ನಿಯಂತ್ರಣ ತಪ್ಪಿ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಣೆಬೆನ್ನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.