ADVERTISEMENT

ರಾಣೆಬೆನ್ನೂರು: ಚೌಡೇಶ್ವರಿ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 3:21 IST
Last Updated 13 ಜನವರಿ 2026, 3:21 IST
ರಾಮಲಿಂಗ ಚೌಡೇಶ್ವರಿ
ರಾಮಲಿಂಗ ಚೌಡೇಶ್ವರಿ   

ರಾಣೆಬೆನ್ನೂರು: ತಾಲ್ಲೂಕಿನ ಹೊಸ ಮುಷ್ಟೂರು ಗ್ರಾಮದಲ್ಲಿ ಜ.13 ಮತ್ತು 14 ರಂದು ಎರಡು ದಿನಗಳ ಕಾಲ ಚೌಡೇಶ್ವರಿ ಜಾತ್ರಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

ಶಾಸಕ ಪ್ರಕಾಶ ಕೋಳಿವಾಡ ಹಾಗೂ ಗಣ್ಯರು ಉದ್ಘಾಟಿಸುವರು. ಜ.13 ರಂದು ಬೆಳಿಗ್ಗೆ 8 ಗಂಟೆಗೆ ಚೌಡೇಶ್ವರಿ ದೇವಿಯ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಡೊಳ್ಳು, ಬಾಜಾ, ಬಜಂತ್ರಿ, ಹಲಗೆಗಳ ಮೆರವಣಿಗೆಯ ಮೂಲಕ ದೇವಿಯ ಕಟ್ಟೆಯನ್ನು ಅಲಂಕರಿಸಲಾಗುವುದು. ದೇವಿಯ ಕಟ್ಟೆಗೆ ನೂತನವಾಗಿ ನಿರ್ಮಿಸಿದ ಮೇಲ್ಛಾವಣಿಯ ಕಟ್ಟಡವನ್ನು ಹಾಗೂ ಅಂದೇ ರಾತ್ರಿ 9 ಗಂಟೆಗೆ ಸುಪ್ರಸಿದ್ದ ಹೊಸಪೇಟೆಯ ಜ್ಯೂನಿಯರ್ ರವಿಚಂದ್ರನ್‌ ಅವರ ರೂಪಾಂಜಲಿ ಇವೆಂಟ್ಸ್ ಆರ್ಕೆಸ್ಟ್ರಾ ಅವರಿಂದ ಸ್ಟೇಜ್ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯುತ್ತವೆ.

ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಅಧ್ಯಕ್ಷತೆ ವಹಿಸುವರು. 14ರ ಬುಧವಾರ ಬೆಲ್ಲದ ಬಂಡಿ, ಎತ್ತಿನ ಮೆರವಣಿಗೆ ಹಾಗೂ ಹಲಗೆ ಕಲಾ ತಂಡದಿಂದ ಹೂವಿನ ಹಾರದ ಮೆರವಣಿಗೆ ನಡೆಸಿ ದೇವರಿಗೆ ಹರಕೆ ತೀರಿಸಲಾಗುವುದು ಎಂದು ಜಾತ್ರಾ ಮಹೋತ್ಸವದ ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.