ADVERTISEMENT

ಜ್ಞಾನದ ಮಾರ್ಗ ತೋರಿದ ಸಂತ ಸೇವಾಲಾಲ್‌: ಶಾಸಕ ಪ್ರಕಾಶ ಕೋಳಿವಾಡ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 6:46 IST
Last Updated 17 ಫೆಬ್ರುವರಿ 2026, 6:46 IST
ರಾಣೆಬೆನ್ನೂರಿನ ಮೇಡ್ಲೇರಿ ರಸ್ತೆಯ ಚೌಡೇಶ್ವರಿ ಬಡಾವಣೆಯ ಸಮೀಪದ ಸೇವಾಲಾಲ್‌ ಉದ್ಯಾನದಲ್ಲಿ ಏರ್ಪಡಿಸಿದ ಸೇವಾಲಾಲ್‌ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಪ್ರಕಾಶ ಕೋಳಿವಾಡ ಹಾಗೂ ಗಣ್ಯರು ಸೇವಾಲಾಲ ಅವರ ಭಾವಚಿತ್ರಕ್ಕೆ  ಪುಷ್ಪಾರ್ಚನೆ ಮಾಡಿದರು. 
ರಾಣೆಬೆನ್ನೂರಿನ ಮೇಡ್ಲೇರಿ ರಸ್ತೆಯ ಚೌಡೇಶ್ವರಿ ಬಡಾವಣೆಯ ಸಮೀಪದ ಸೇವಾಲಾಲ್‌ ಉದ್ಯಾನದಲ್ಲಿ ಏರ್ಪಡಿಸಿದ ಸೇವಾಲಾಲ್‌ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಪ್ರಕಾಶ ಕೋಳಿವಾಡ ಹಾಗೂ ಗಣ್ಯರು ಸೇವಾಲಾಲ ಅವರ ಭಾವಚಿತ್ರಕ್ಕೆ  ಪುಷ್ಪಾರ್ಚನೆ ಮಾಡಿದರು.    

ರಾಣೆಬೆನ್ನೂರು: ‘ಸಂತ ಸೇವಾಲಾಲ್‌ ಅವರು ತಮ್ಮ ಪವಾಡಗಳ ಮೂಲಕ ಜನ ಮನದಲ್ಲಿ ಗುರುವಿನ ಸ್ಥಾನ ಪಡೆದವರು. ಬಂಜಾರ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಜ್ಞಾನದ ಮಾರ್ಗ ತೋರಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ಇಲ್ಲಿನ ಮೇಡ್ಲೇರಿ ರಸ್ತೆಯ ಚೌಡೇಶ್ವರಿ ಬಡಾವಣೆ ಸಮೀಪದ ಸೇವಾಲಾಲ್‌ ಉದ್ಯಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್‌ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಂಜಾರ ಸಮುದಾಯದ ಸರದಾರ ಸೇವಾಲಾಲ್‌ ಹಾಗೂ ಕುಮಾರ ಮಹಾರಾಜ್‌ ತಪಸ್ವಿ ಅವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಾಜಿ ಶಾಸಕ ಅರುಣಕುಮಾರ ಪೂಜಾರ, ಬಂಜಾರ ಸಮಿತಿ ತಾಲ್ಲೂಕು ಅಧ್ಯಕ್ಷ ರಾಮಣ್ಣ ನಾಯಕ, ರಮೇಶ ನಾಯಕ, ಸಂತೋಷ ಪಾಟೀಲ, ಚಂದ್ರಪ್ಪ ಲಮಾಣಿ, ಪರಮೇಶ ಲಮಾಣಿ, ಮಾರುತಿ ರಾಠೋಡ, ಪರಮೇಶ ಗೂಳಣ್ಣವನರ, ತೇಜಪ್ಪ ಲಮಾಣಿ, ರಮೇಶ ಹಂಚಿನಮನಿ ಸೇರಿದಂತೆ ಇತರರು ಇದ್ದರು.

ADVERTISEMENT

ಭಾವಚಿತ್ರದ ಮೆರವಣಿಗೆ: ಇಲ್ಲಿನ ಮಿನಿವಿಧಾನ ಸೌಧದ ಎದುರು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಸೋಮವಾರ ಸೇವಾಲಾಲ್‌ ಅವರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಭಾವಚಿತ್ರದ ಮೆರವಣಿಗೆಗೆ ತಹಶೀಲ್ದಾರ್‌ ಆರ್‌.ಎಚ್‌. ಭಾಗವಾನ ಅವರು ಚಾಲನೆ ನೀಡಿದರು.

ಸೇವಾಲಾಲ್‌ ಅವರ ಭಾವಚಿತ್ರದ ಮೆರವಣಿಗೆಯು ಸಕಲ ವಾಧ್ಯಗಳೊಂದಿಗೆ ಸಿದ್ದೇಶ್ವರ ನಗರದಿಂದ ಆರಂಭವಾಗಿ  ಸೇವಾಲಾಲ್‌ ಉದ್ಯಾನ ತಲುಪಿತು. ಮೆರವಣಿಗೆಯಲ್ಲಿ ಬಂಜಾರ ಸಮುದಾಯದ ಮಹಿಳೆಯರು ಲಂಬಾಣಿ ಉಡುಗೆ ತೊಟ್ಟು ನೃತ್ಯ ಪ್ರದರ್ಶಿಸಿದರು. ಬೆಳಿಗ್ಗೆ ಉದ್ಯಾನದಲ್ಲಿರುವ ಸಂತ ಸೇವಾಲಾಲರ ದೇವಾಲಯದಲ್ಲಿ ಅವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ಸರತಿಯಲ್ಲಿ ಸಾಗಿ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.