ADVERTISEMENT

ಲಾಟರಿ ಹಣದ ಆಸೆಗೆ ₹99 ಸಾವಿರ ಕಳೆದುಕೊಂಡ ರಟ್ಟೀಹಳ್ಳಿ ನಿವಾಸಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 16:20 IST
Last Updated 27 ನವೆಂಬರ್ 2021, 16:20 IST

ಹಾವೇರಿ: ಕೆಬಿಸಿ ಕಂಪನಿಯಿಂದ ₹33 ಲಕ್ಷ ಲಾಟರಿ ಹಣ ಬಂದಿದೆ. ಅದನ್ನು ಪಡೆಯಬೇಕಾದರೆ ಕೆಲವು ಶುಲ್ಕಗಳನ್ನು ಕಟ್ಟಬೇಕು ಎಂದು ನಂಬಿಸಿ ₹99,200 ಅನ್ನು ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುವ ಪ್ರಕರಣ ನಗರದ ಸಿಇಎನ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ರಾಜಸ್ತಾನ ಮೂಲದ ವಿಕ್ರಮ್‌ ಸಿಂಗ್‌ ಎಂಬುವವರು ಪ್ರಸ್ತುತ ರಟ್ಟೀಹಳ್ಳಿ ಪಟ್ಟಣದಲ್ಲಿ ವಾಸವಾಗಿದ್ದು, ಇವರ ಮೊಬೈಲ್‌ ನಂಬರ್‌ಗೆ ಸುನಿಲ್‌ಕುಮಾರ್‌ ಎಂಬಾತ ಕರೆ ಮಾಡಿ, ನಾನು, ಮುಂಬೈನ ಕೆಬಿಸಿ ಹೆಡ್‌ ಆಫೀಸ್‌ನಿಂದ ಲಾಟರಿ ಮ್ಯಾನೇಜರ್‌ ಮಾತನಾಡುತ್ತಿದ್ದೇನೆ. ನಿಮಗೆ ಲಾಟರಿ ಹಣ ಬಂದಿದೆ ಎಂದು ನಂಬಿಸಿ ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT