ADVERTISEMENT

ರಟ್ಟಿಹಳ್ಳಿ: ಸಂಭ್ರಮದ ಮಧ್ವ ನವಮಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 12:29 IST
Last Updated 3 ಫೆಬ್ರುವರಿ 2020, 12:29 IST
ರಟ್ಟೀಹಳ್ಳಿಯ ಕೋಟೆಯ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಬ್ರಾಹ್ಮಣ ಸಮುದಾಯದ ವತಿಯಿಂದ ಸೋಮವಾರ ಮಧ್ವನವಮಿ ಆಚರಿಸಲಾಯಿತು 
ರಟ್ಟೀಹಳ್ಳಿಯ ಕೋಟೆಯ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಬ್ರಾಹ್ಮಣ ಸಮುದಾಯದ ವತಿಯಿಂದ ಸೋಮವಾರ ಮಧ್ವನವಮಿ ಆಚರಿಸಲಾಯಿತು    

ರಟ್ಟೀಹಳ್ಳಿ: ಕೋಟೆಯ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಬ್ರಾಹ್ಮಣ ಸಮುದಾಯದ ವತಿಯಿಂದ ಸೋಮವಾರ ಮಧ್ವನವಮಿ ಆಚರಿಸಲಾಯಿತು.

ಬೆಳಿಗ್ಗೆ ರಾಯರ ಬೃಂದಾವನಕ್ಕೆ ಕ್ಷೀರಾಭಿಷೇಕದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ಶ್ರೀರಾಮನ ಹಾಗೂ ಮಧ್ವಾಚಾರ್ಯರ ಪಲ್ಲಕ್ಕಿಸೇವೆ, ಮಧು ಅಭಿಷೇಕ, ಮಹಾನೈವೇದ್ಯ, ಅನ್ನಸಂತರ್ಪಣೆ ಜರುಗಿತು.

ಕಾರ್ಯಕ್ರಮದಲ್ಲಿ ರಘೋತ್ತಮ ಆಚಾರ್ಯ, ಜಯತೀರ್ಥ ಅಧ್ಯಾಪಕ, ರಾಘವೇಂದ್ರ ಸವಣೂರ, ವಿಜೇಂದ್ರ ಶಿರೋಳ, ಅನಂತ ಅದ್ವಾನಿ, ವಾಸು ಜೋಶಿ, ವಿನಾಯಕ ನಾಡಿಗೇರ, ಸುಬ್ಬಣ್ಣ, ವಿಶ್ವನಾಥ, ಗೋಪಾಲ, ವಾದಿರಾಜ, ಗಿರೀಶ, ರಮಾಬಾಯಿ ಮನ್ನೋಪಂತರ, ಗೀತಾಬಾಯಿ, ಶಾರದಾ ನಾಡಿಗೇರ, ಸುನೀತಾ, ಲಕ್ಷ್ಮೀ, ವಿಜಯಲಕ್ಷ್ಮೀ, ಪರಿಮಳಾ ಅದ್ವಾನಿ, ಸಂಗೀತಾ, ಮುಂತಾದವರು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.