ADVERTISEMENT

ರಟ್ಟೀಹಳ‍್ಳಿ: ಬೈಕ್‌ನಲ್ಲಿದ್ದ ₹1.40 ಲಕ್ಷ ಕದಿಯುತ್ತಿದ ಕಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 6:10 IST
Last Updated 12 ಅಕ್ಟೋಬರ್ 2025, 6:10 IST
ರವಿ ರಾಮು ಬಾಣಸವಾಡಿ,
ರವಿ ರಾಮು ಬಾಣಸವಾಡಿ,   

ರಟ್ಟೀಹಳ‍್ಳಿ: ಪಟ್ಟಣದ ನಿವಾಸಿ ಮಂಜುನಾಥ ಶೇಖಪ್ಪ ಪೂಜಾರ ಎಂಬುವರ ಬೈಕ್‌ನಲ್ಲಿದ್ದ ₹1.40 ಲಕ್ಷ ಹಣ ಕದಿಯುತ್ತಿರುವ ಇಬ್ಬರು ಆರೋಪಿಗಳನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಂಜುನಾಥ ಪೂಜಾರ ಅವರು ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್‌ನಿಂದ ಹಣ ತೆಗೆದುಕೊಂಡು ಹೊರಟ ವೇಳೆ ಅಡ್ಡಗಟ್ಟಿದ ಆರೋಪಿಗಳು ಮಂಜುನಾಥ ಅವರ ಗಮನ ಬೇರೆಡೆ ಸೆಳೆದು ಬೈಕ್‌ನಲ್ಲಿದ್ದ ಹಣ ಎಗರಿಸಿ ಪರಾರಿಯಾಗಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಮಂಜುನಾಥ ಸ್ಥಳೀಯರ ಸಹಕಾರದಿಂದ ಆರೋಪಿಗಳನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಆರೋಪಿಗಳಾದ ರವಿ ರಾಮು ಬಾಣಸವಾಡಿ ಹಾಗೂ ಶಂಕರ ಮಂಜಪ್ಪ ನಾಯ್ಡು ಎಂಬುವರು ಬೆಂಗಳೂರು ಮೂಲದವರು ಎಂದು ತಿಳಿದುಬಂದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT
ಶಂಕರ ಮಂಜಪ್ಪ ನಾಯ್ಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.