ADVERTISEMENT

ರಟ್ಟೀಹಳ್ಳಿ: ಪಂ.ಪಂ ಚುನಾವಣೆ ಗರಿಗೆದರಿದ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 2:41 IST
Last Updated 7 ಜುಲೈ 2025, 2:41 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

ರಟ್ಟೀಹಳ್ಳಿ: ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪಟ್ಟಣ ಪಂಚಾಯಿತಿ ಚುನಾವಣೆ ರಂಗು. ಜೂನ್ 27 ರಂದು ಹೊರಡಿಸಿದ ರಾಜ್ಯ ಚುನಾವಣಾ ಆಯೋಗದ ಆದೇಶದಿಂದ ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಮೊದಲ ಚುನಾವಣೆಯ ಆಖಾಡ ಸಿದ್ಧಗೊಳ್ಳುತ್ತಿದೆ.

ಕಳೆದ ಐದು ವರ್ಷಗಳ ಹಿಂದೆ ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆರಿದೆ. ಅಲ್ಲಿಂದ ಇಲ್ಲಿಯವರೆಗೂ ಚುನಾಯಿತ ಪ್ರತಿನಿಧಿಗಳಿಲ್ಲದೇ ತಹಶೀಲ್ದಾರ್‌ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ADVERTISEMENT

ಈಗಾಗಲೇ ರಾಜ್ಯ ಚುನಾವಣಾ ಆಯೋಗ ಚುನಾವಣೆಗೆ ಸಂಬಂಧಿಸಿದ ಮಾಹಿತಿಗಳ ವರದಿಗಳನ್ನು ಪೂರ್ವಸಿದ್ಧತೆ ಕುರಿತಾಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಹಾಗೂ ತಾಲ್ಲೂಕಾಡಳಿತಕ್ಕೆ ಸೂಚಿಸಿದೆ.ಮತದಾರರ ಪಟ್ಟಿ ತಯಾರಿಕೆ, ಮತದಾನ ಕೇಂದ್ರಗಳ ಪಟ್ಟಿ, ಸಿಬ್ಬಂದಿ ವರ್ಗ ನೇಮಕ, ಇವಿಎಂಗಳ ಸಂಗ್ರಹ, ಚುನಾವಣಾಧಿಕಾರಿಗಳ ನೇಮಕ, ಅಭ್ಯರ್ಥಿಗಳ ಚುನಾವಣಾ ವೆಚ್ಚಗಳ ಪರಿಶೀಲನೆಗೆ ಅಧಿಕಾರಿಗಳ ನೇಮಕ, ಚುನಾವಣಾ ಸಾಮಗ್ರಿಗಳ ಸಂಗ್ರಹ ಕುರಿತು ಪೂರ್ವಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಸೂಚನೆ ನೀಡಲಾಗಿದ್ದು, ತಾಲ್ಲೂಕು ಆಡಳಿತ ಚುನಾವಣೆಯ ಪೂರ್ವಸಿದ್ಧತೆ ಕಾರ್ಯ ಬಿರುಸುಗೊಂಡಿದೆ.

ವಾರ್ಡಗಳ ವಿಂಗಡಣೆ ಮತ್ತು ಮೀಸಲಾತಿ: ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿಗೆ ವಾರ್ಡವಾರು ಮೀಸಲಾತಿ ನಿಗದಿಪಡಿಸಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, 15 ವಾರ್ಡಗಳ ಮಿಸಲಾತಿ ಅಧಿಸೂಚನೆ ಪ್ರಕಟಿಸಿದೆ.ವಾರ್ಡ್ ಸಂಖ್ಯೆ 1 ಪರಿಶಿಷ್ಟ ಪಂಗಡ, ವಾರ್ಡ್ ಸಂಖ್ಯೆ 2 ಹಿಂದುಳಿದ ವರ್ಗ(ಎ) ಮಹಿಳೆ, 3 ಸಾಮಾನ್ಯ, 4 ಸಾಮಾನ್ಯ, 5 ಹಿಂದುಳಿದ ವರ್ಗ (ಎ), 6 ಸಾಮಾನ್ಯ ಮಹಿಳೆ 7 ಹಿಂದುಳಿದ ವರ್ಗ (ಬಿ) 8 ಹಿಂದುಳಿದ ವರ್ಗ (ಎ) ಮಹಿಳೆ, 9 ಸಾಮಾನ್ಯ, 10 ಸಾಮಾನ್ಯ, 11 ಹಿಂದುಳಿದ ವರ್ಗ (ಎ), 12 ಸಾಮಾನ್ಯ ಮಹಿಳೆ, 13 ಸಾಮಾನ್ಯ ಮಹಿಳೆ, 14 ಪರಿಶಿಷ್ಟ ಜಾತಿ, 15 ಸಾಮಾನ್ಯ ಮಹಿಳೆ ಎಂದು ಪ್ರಕಟಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.