
ಶಿಗ್ಗಾವಿ: ಪಾಲಕರ, ಸಂಬಂಧಿಕರ ಪ್ರತಿಷ್ಟೆಗಾಗಿ ಅಂಕಗಳ ಆಧಾರಿತವಾಗಿ ಓದುವುದನ್ನು ಬಿಟ್ಟು ಜ್ಞಾನ ಸಂಗ್ರಹಣೆಗಾಗಿ ಪಠ್ಯ ಆಧಾರಿತ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳಸಿಕೊಳ್ಳಬೇಕು. ಆದ್ದರಿಂದ ಮೌಲ್ಯಾಧಾರಿತ ಬದುಕು ಸಾಗಿಸಲು ಸಾಧ್ಯವಿದೆ ಎಂದು ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಹೇಳಿದರು.
ತಾಲ್ಲೂಕಿನ ಬಂಕಾಪುರ ಪಟ್ಟಣದ ಕರ್ನಾಟಕ ಕೀರ್ತಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ 70ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಕನ್ನಡ ಜಾಗೃತಿ ಅಭಿಯಾನ ಮತ್ತು ವಿಶೇಷ ಉಪನ್ಯಾಸ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಓದು, ಬರೆಯುವ ಹವ್ಯಾಸ ಬದುಕಿನ ಚಿತ್ರಣವನ್ನು ಬದಲಿಸುತ್ತದೆ. ಬರೀ ಪಠ್ಯ ಓದುವುದು. ಪರೀಕ್ಷೆ ಬರೆಯುವುದು ಹೆಚ್ಚಿನ ಅಂಕ ಗಳಿಸಲಿಕ್ಕೆ ಮಾತ್ರ ಸೀಮಿತರಾಗುತ್ತಿದ್ದೇವೆ. ಪಾಲಕರು, ಪೋಷಕರು ಸಹ ಇದಕ್ಕೆ ಒತ್ತಾಯಿಸುತ್ತಿದ್ದಾರೆ. ಅದಕ್ಕೆ ಶಿಕ್ಷಕ ವೃಂದವು ಸಹ ಅಂಕಗಳಿಗೆ ಸೀಮಿತವಾದ ಬೋಧನೆ ಮಾಡುವಂತಾಗಿದೆ. ಅದರಿಂದ ಮಕ್ಕಳು ಒಂದು ಚೌಕಟ್ಟಿನಲ್ಲಿ ಬದುಕುವಂತಾಗಿದೆ. ಆದ್ದರಿಂದ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿವೆ. ಮಕ್ಕಳು ಸದೃಢರಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಮಕ್ಕಳನ್ನು ಗಟ್ಟಿಗೊಳಿಸುವ ಕಾರ್ಯ ಮಾಡಿರಿ ಎಂದರು.
ರೇಣುಕಾಚಾರ್ಯ ಆಸ್ಪತ್ರೆ ಮುಖ್ಯವೈದ್ಯ ಡಾ.ಆರ್.ಎಸ್.ಅರಳೆಲೆಮಠ, ಮಹಾದೇವ ಉಂಕಿ, ಸಿದ್ದಲಿಂಗಪ್ಪ ನರೆಗಲ್ಲ, ಸದಾಶಿವಸ್ವಾಮಿ ಹಿರೇಮಠ, ಎ.ಎಫ್.ಹೊಸಮನಿ, ಅಬ್ದುಲರಜಾಕ ತಹಶೀಲ್ದಾರ್, ಗೌಡಪ್ಪ ಬನ್ನೆ, ಗುರುರಾಜ ಚಲವಾದಿ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ನಾಗಪ್ಪ ಬೆಂತೂರ, ಹೋಬಳಿ ಘಟಕದ ಅಧ್ಯಕ್ಷ ಎ.ಕೆ.ಆದವಾನಿಮಠ ಅಧ್ಯಕ್ಷತೆ ವಹಿಸಿದ್ದರು. ಕಸಾಬ ಹೋಬಳಿ ಘಟಕದ ಸದಸ್ಯ ಹನುಮಂತಪ್ಪ ಯು.ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಾನಪದ ಕಲಾವಿದ ಗುರುರಾಜ ಚಲವಾದಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಕರ್ನಾಟಕ ಕೀರ್ತಿ ವಿದ್ಯಾ ಸಂಸ್ಥೆ ಅಧ್ಯಕ್ಷ ಜಗದೀಶ ಕುರಂದವಾಡ, ಬಂಕಾಪುರ ಉಪತಹಶೀಲ್ದಾರ್ ವೆಂಕಟೇಶ ಕುಲಕರ್ಣಿ, ಪ್ರಾಚಾರ್ಯ ಎಸ್.ಆರ್.ಕಾರಗಿ, ಮುಖಂಡರಾದ ಮಂಜುನಾಥ ಕೂಲಿ, ಡಾ.ರಾಜು ಇಳಿಗೇರ, ಬಸವರಾಜ ನಾರಾಯಣಪುರ, ಮಂಜುನಾಋ ವಳಗೇರಿ, ಸಿ.ಟಿ.ನೆಲೂಗಲ್ಲ, ಆರ್.ಎಚ್.ರೂಡ್ಡಣ್ಣವರ, ಪ್ರೊ.ಅನಿಲ ತಳವಾರ ಸೇರಿದಂತೆ ಕರ್ನಾಟಕ ಕೀರ್ತಿ ಪ್ರೌಢಶಾಲೆ ಶಿಕ್ಷಕರು, ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.