ADVERTISEMENT

ಬಿಸಿಲು: ನೂರರ ಸಮೀಪಿಸಿದ ‘ಬೀನ್ಸ್’

ಏರಿಕೆಯಾಗುತ್ತಿರುವ ಟೊಮೆಟೊ ಬೆಲೆ; ಹಣ್ಣು ಸ್ಥಿರ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 16:58 IST
Last Updated 11 ಏಪ್ರಿಲ್ 2019, 16:58 IST
ಹಾವೇರಿ ಮಾರುಕಟ್ಟೆಯಲ್ಲಿ ಗುರುವಾರ ಕಂಡು ಬಂದ ಬೀನ್ಸ್ ವ್ಯಾಪಾರ
ಹಾವೇರಿ ಮಾರುಕಟ್ಟೆಯಲ್ಲಿ ಗುರುವಾರ ಕಂಡು ಬಂದ ಬೀನ್ಸ್ ವ್ಯಾಪಾರ   

ಹಾವೇರಿ:ನಗರದ ಮಾರುಕಟ್ಟೆಯಲ್ಲಿ ಗುರುವಾರ ಟೊಮೆಟೊ ಹಾಗೂ ಬೀನ್ಸ್‌ ಬೆಲೆ ಏರಿಕೆಯಾಗಿದ್ದು, ಉಳಿದಂತೆ ದರಗಳು ಸ್ಥಿರವಾಗಿವೆ.

ಬಿಸಿಲಿನ ಝಳದ ಪರಿಣಾಮ ಬೀನ್ಸ್‌ ಬೆಳೆ ಒಣಗುತ್ತಿದೆ. ಇನ್ನೊಂದೆಡೆ ನೀರಿನ ಸಮಸ್ಯೆಯೂ ಇದೆ. ಈ ಕಾರಣಗಳಿಂದ ಮಾರುಕಟ್ಟೆಗೆ ಬೀನ್ಸ್ ಅವಕ ಕಡಿಮೆಯಾಗಿದ್ದು, ಬೆಲೆಯು ಕೆ.ಜಿ.ಗೆ ₹100ರಸಮೀಪಕ್ಕೆ ಬಂದಿದೆ.

ಗುರುವಾರ ಮಾರುಕಟ್ಟೆಯಲ್ಲಿ ಸಾಮಾನ್ಯ ಬೀನ್ಸ್‌ ಕೆ.ಜಿ.ಗೆ ₹80 ರಿಂದ ₹100ರ ತನಕ ಇದ್ದರೆ, ಎಳೆಯ ತಾಜಾ ಬೀನ್ಸ್‌ಗೆ ₹100ರ ಮೇಲಿದೆ ಎಂದು ತರಕಾರಿ ವ್ಯಾಪಾರಿ ತೌಸಿಫ್‌ ಕೋಣನತಂಬಗಿ ತಿಳಿಸಿದರು.

ADVERTISEMENT

ಅಲ್ಲಲ್ಲಿ ಸುರಿದ ಆಲಿಕಲ್ಲು ಮಳೆಯಿಂದಾಗಿ ಟೊಮೆಟೊ ಬೆಳೆ ಹಾನಿಯಾಗಿದೆ. ಮಾರುಕಟ್ಟೆಗೆ ಕಡಿಮೆ ಅವಕವಾಗಿದೆ. ಈ ವಾರ ಕೆ.ಜಿ. ಟೊಮೆಟೊ ಬಾಕ್ಸ್‌ಗೆ ₹400 ಇದ್ದು, ಮುಂದಿನ ದಿನಗಳಲ್ಲಿ ಮತ್ತೆ ಏರುವ ಸಾಧ್ಯತೆ ಇದೆ ಎಂದು ವ್ಯಾಪಾರಿ ಇಯಾಕತ್‌ ಹತ್ತಿಕಾಳ ತಿಳಿಸಿದರು.

ಉಳಿದ ತರಕಾರಿಗಳ ಬೆಲೆ ಕಳೆದ ವಾರದಂತೆ ಬಹುತೇಕ ಸ್ಥಿರವಾಗಿದೆ. ಅಲ್ಲದೇ, ಅಲ್ಲಲ್ಲಿ ಮದುವೆ, ಮುಂಜಿ,ಗೃಹ ಪ್ರವೇಶದಂತಹ ಕಾರ್ಯಗಳು ನಡೆಯುತ್ತಿವೆ. ಇದರಿಂದಾಗಿ ಬದನೆಕಾಯಿ, ಮೆಣಸಿಕಾಯಿ, ನುಗ್ಗೆಕಾಯಿಗೆ ಬೇಡಿಕೆ ಹೆಚ್ಚಿದೆ ಎಂದು ಅವರು ವಿವರಿಸಿದರು.

ಕಳೆದ ವಾರ ₹20 ರಂತೆ ಮಾರಾಟವಾಗುತ್ತಿದ್ದ ಟೊಮೆಟೊ ಈ ವಾರ ಕೆ.ಜಿ.ಗೆ ₹30ಕ್ಕೆ ಏರಿಕೆಯಾಗಿದೆ. ಬೀನ್ಸ್‌ ₹100 ರಿಂದ ₹80, ಬೆಂಡೆಕಾಯಿ ₹40, ಮೆಣಸಿನಕಾಯಿ ₹60, ಈರುಳ್ಳಿ ₹15, ಬೀಟ್ ರೂಟ್ ₹40, ಕ್ಯಾರೆಟ್‌ ₹40, ಕ್ಯಾಬೆಜ್ ₹30, ಸೌತೆಕಾಯಿ ₹40, ಹೂಕೋಸು ₹30, ಬದನೆಕಾಯಿ (ಮುಳಗಾಯಿ) ₹30, ನುಗ್ಗೆಕಾಯಿ ₹30, ಹಾಗಲಕಾಯಿ ₹60 ಇವೆ. ಒಟ್ಟಾರೆ, ಬೆಲೆಯನ್ನು ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಏರಿಕೆಯಾಗಿದೆ ಎಂದು ಮುರ್ನಾಸಾಬ್‌ ತಿಳಿಸಿದರು.

ಮಾರುಕಟ್ಟೆಗೆ ಹಣ್ಣುಗಳ ಅವಕ ಆಧರಿಸಿ ಬೆಲೆ ವ್ಯತ್ಯಯವಾಗುತ್ತದೆ. ಕಳೆದ ವಾರಕ್ಕೆ ಹೋಲಿಕೆಮಾಡಿದರೆ ಹಣ್ಣುಗಳ ದರ ಸ್ಥಿರವಾಗಿದೆ. ಸೇಬು ಹಣ್ಣು ₹140, ದ್ರಾಕ್ಷಿ ₹80, ದಾಳಿಂಬೆ ₹100, ಕಿತ್ತಳೆ ₹80 ಇವೆ ಎಂದು ವ್ಯಾಪಾರಿ ಖಾಸಿಂ ಸಾಬ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.