ADVERTISEMENT

ಬಸದಿ ಜೀರ್ಣೋದ್ಧಾರಕ್ಕೆ ₹2 ಲಕ್ಷ ದೇಣಿಗೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2024, 12:35 IST
Last Updated 24 ಜನವರಿ 2024, 12:35 IST
ದುಂಡಸಿ ವಲಯದ ಅರಟಾಳ ಗ್ರಾಮದ ಶ್ರೀ 1008 ಪ್ರಾಶ್ವನಾಥ್ ಜೈನ ದಿಗಂಬರ ಬಸದಿ ದೇವಸ್ಥಾನಕ್ಕೆ 2ಲಕ್ಷದ ಚೆಕ್ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಬಸದಿಯ ಸಂಘಟಕರಿಗೆ ವಿತರಿಸಿದರು.
ದುಂಡಸಿ ವಲಯದ ಅರಟಾಳ ಗ್ರಾಮದ ಶ್ರೀ 1008 ಪ್ರಾಶ್ವನಾಥ್ ಜೈನ ದಿಗಂಬರ ಬಸದಿ ದೇವಸ್ಥಾನಕ್ಕೆ 2ಲಕ್ಷದ ಚೆಕ್ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಬಸದಿಯ ಸಂಘಟಕರಿಗೆ ವಿತರಿಸಿದರು.   

ತಡಸ (ಅರಟಾಳ): ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಸ್ಥೆಯು ಅನೇಕ ವರ್ಷಗಳಿಂದ ದೇವಸ್ಥಾನ ಹಾಗೂ ಬಸೀದಿಗಳ ಜೀರ್ಣೋದ್ಧಾರಕ್ಕೆ ತನ್ನದೇ ಅದ ಕೊಡುಗೆ ನೀಡುತ್ತಾ ಬರುತ್ತಿದೆ ಎಂದು ಧರ್ಮಸ್ಥಳ ಸಂಸ್ಥೆಯ ತಾಲ್ಲೂಕಿನ ಯೋಜನಾಧಿಕಾರಿ ಉಮಾ.ಎನ್‌.ಜಿ.ಹೇಳಿದರು.

ದುಂಡಸಿ ವಲಯದ ಅರಟಾಳ ಗ್ರಾಮದ ಶ್ರೀ 1008 ಪಾರ್ಶ್ಚನಾಥ ಜೈನ ದಿಗಂಬರ ಬಸೀದಿ ದೇವಸ್ಥಾನಕ್ಕೆ ₹ 2 ಲಕ್ಷದ ಚೆಕ್ ವಿತರಣೆ ಮಾಡಿ ಮಾತನಾಡಿದ ಅವರು ದುಂಡಿಸಿ ವಲಯದ ಅರಟಾಳ ಕಾರ್ಯಕ್ಷೇತ್ರದ ಶ್ರೀ 1008 ಪಾರ್ಶ್ಚನಾಥ ಜೈನ ದಿಗಂಬರ ಬಸದಿ ದೇವಸ್ಥಾನಕ್ಕೆ ಸಂಸ್ಥೆಯು ಹಲವು ಸಾಮಾಜಿಕ ಕಾರ್ಯ ಮಾಡುತ್ತಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಅವರು ಶ್ರೀ ಈ ನಿಟ್ಟಿನಲ್ಲಿ ಶ್ರೀ 1008 ಪಾರ್ಶ್ಚನಾಥ ಜೈನ ದಿಗಂಬರ ಬಸೀದಿಗೂ ಕೂಡ ಲಕ್ಷ ಮೊತ್ತವನ್ನು ಪೂಜ್ಯರು ಆಶೀರ್ವಾದ ರೂಪದಲ್ಲಿ ನೀಡಿದ್ದಾರೆ ಎಂದರು.

ದೇವಸ್ಥಾನ ಕಮಿಟಿ ಅಧ್ಯಕ್ಷ ವೀರಪ್ಪ ಚೌಟಿ, ಕಾರ್ಯದರ್ಶಿ ಮನೋಹರ ಸಾತಗೊಂಡ, ವಲಯ ಮೇಲ್ವಿಚಾರಕ ಜಯರಾಮ್, ಕೃಷಿ ಮೇಲ್ವಿಚಾರಕ ಪ್ರಶಾಂತ್, ಸೇವಾಪ್ರತಿನಿಧಿ ಶಿರಿನ ಬಾನು ಮುಂತಾದವರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.