ADVERTISEMENT

ಸಾವಿರಾರು ಉಳಿ ಪೆಟ್ಟು ಬಿದ್ರೆ ‘ರಾಜಹುಲಿ’ಯಾಗಲು ಸಾಧ್ಯ: ಎಸ್‌.ಟಿ. ಸೋಮಶೇಖರ್‌

ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 13:06 IST
Last Updated 15 ಫೆಬ್ರುವರಿ 2021, 13:06 IST
ಸಚಿವ ಎಸ್ ಟಿ ಸೋಮಶೇಖರ್ 
ಸಚಿವ ಎಸ್ ಟಿ ಸೋಮಶೇಖರ್    

ಹಿರೇಕೆರೂರು (ಹಾವೇರಿ): ಬಿ.ಎಸ್‌.ಯಡಿಯೂರಪ್ಪನವರು 40 ವರ್ಷಗಳ ರಾಜಕಾರಣದಲ್ಲಿ ಸಾವಿರಾರು ಉಳಿ ಪೆಟ್ಟು ತಿಂದಿದ್ದಾರೆ. ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ‘ರಾಜಹುಲಿ’ ಎನಿಸಿಕೊಂಡಿದ್ದಾರೆ. ಅದೇ ರೀತಿ ನಿಮಗೂ (ಬಿ.ವೈ.ವಿಜಯೇಂದ್ರ) ಸಾವಿರಾರು ಉಳಿ ಪೆಟ್ಟು ಬೀಳುತ್ತದೆ. ಆಗ ಮಾತ್ರ ಸುಂದರ ಮೂರ್ತಿಯಾಗಲು ಸಾಧ್ಯ. ತಂದೆ ‘ರಾಜಹುಲಿ’ಯಂತೆ ನೀವು ಸೇವೆ ಮಾಡಿ ಎಂಬರ್ಥದಲ್ಲಿ ಮೈಸೂರಿನಲ್ಲಿ ಹೇಳಿದ್ದೇನೆ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್‌ ಸ್ಪಷ್ಟನೆ ನೀಡಿದರು.

ಮಾಧ್ಯಮದವರೊಂದಿಗೆ ಸೋಮವಾರ ಮಾತನಾಡಿ, ‘ಟಿ.ವಿ, ಬೈಕ್‌, ಫ್ರಿಡ್ಜ್‌ ಇದ್ದರೆ ಬಿಪಿಎಲ್‌ ಕಾರ್ಡ್‌ ರದ್ದು ಬಗ್ಗೆ ನನಗೆ ಮಾಹಿತಿ ಇಲ್ಲ. ಆ ರೀತಿ ಮಾಡಲು ಸಾಧ್ಯವಿಲ್ಲ. ಒಂದೇ ಕುಟುಂಬದವರು ಮೂರು–ನಾಲ್ಕು ಬಿಪಿಎಲ್‌ ಕಾರ್ಡ್‌ ಇಟ್ಟುಕೊಂಡಿರುವ ಬಗ್ಗೆ ದೂರುಗಳಿವೆ. ನಿಯಮ ಉಲ್ಲಂಘನೆ ಮಾಡಿದ್ದರೆ ಬಿಪಿಎಲ್‌ ಕಾರ್ಡ್‌ ರದ್ದು ಮಾಡಬಹುದು ಅಷ್ಟೆ' ಎಂದರು.

ಇಂಧನ ದರ ಮತ್ತು ಅಡುಗೆ ಅನಿಲ ದರ ಹೆಚ್ಚಳದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವ,ಕೋವಿಡ್‌ ಹಿನ್ನೆಲೆಯಲ್ಲಿ ಒಂದು ತಿಂಗಳಿನಿಂದ ಹೆಚ್ಚುವರಿ ಸೆಸ್‌ ಹಾಕಿದ್ದಾರೆ. ಒಮ್ಮೆ ಜಾಸ್ತಿಯಾಗುತ್ತದೆ. ಕೆಲವೊಮ್ಮೆ ಇಳಿಕೆಯಾಗುತ್ತದೆ. ಎಲ್ಲವನ್ನೂ ಅಡ್ಜೆಸ್ಟ್‌ ಮಾಡಿಕೊಂಡು ಹೋಗಬೇಕು ಎಂದು ಕೇಂದ್ರ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.