ADVERTISEMENT

ಶಂಕರಾಚಾರ್ಯರ ಜಯಂತಿ ಉತ್ಸವ: ಸಾಧಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 7 ಮೇ 2025, 13:10 IST
Last Updated 7 ಮೇ 2025, 13:10 IST
ರಟ್ಟೀಹಳ್ಳಿ ಪಟ್ಟಣದಲ್ಲಿ ಬುಧವಾರ ಶಂಕರ ಸೇವಾ ಸಮಿತಿಯಿಂದ ಶಂಕರಾಚಾರ್ಯ ಜಯಂತಿ ಉತ್ಸವ ಆಚರಿಸಲಾಯಿತು.
ರಟ್ಟೀಹಳ್ಳಿ ಪಟ್ಟಣದಲ್ಲಿ ಬುಧವಾರ ಶಂಕರ ಸೇವಾ ಸಮಿತಿಯಿಂದ ಶಂಕರಾಚಾರ್ಯ ಜಯಂತಿ ಉತ್ಸವ ಆಚರಿಸಲಾಯಿತು.   

ರಟ್ಟೀಹಳ್ಳಿ: ಪಟ್ಟಣದ ಕೋಟೆ ಕದಂಬೇಶ್ವರ ದೇವಸ್ಥಾನದಲ್ಲಿ ಬುಧವಾರ ಶಂಕರ ಸೇವಾ ಸಮಿತಿಯಿಂದ ಶಂಕರಾಚಾರ್ಯರ ಜಯಂತಿ ಉತ್ಸವವನ್ನು ಆಚರಿಸಲಾಯಿತು. ‌

ಅಂದು ಬೆಳಿಗ್ಗೆ ಶಂಕರಾಚಾರ್ಯರ ಚಿತ್ರ ಹಾಗೂ ಪಾಲಕಿ ಸೇವೆ ಕೋಟೆಯಲ್ಲಿ ವಾದ್ಯಮೇಳಗಳೊಂದಿಗೆ ಸಂಚರಿಸಿತು. ಕಂದಬೇಶ್ವರನಿಗೆ ರುದ್ರಾಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ, ನೇವೈದ್ಯ ನೆರವೇರಿಸಲಾಯಿತು. ‌

ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದು ಅತ್ಯುನ್ನತ ಶ‍್ರೇಣಿ ಪಡೆದ ಬ್ರಾಹ್ಮಣ ಸಮಾಜದ ವಿದ್ಯಾರ್ಥಿನಿ ಹರ್ಷಿತಾ ಕುಲಕರ್ಣಿ ಹಾಗೂ ಹಾವೇರಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ದತ್ತಾತ್ರೇಯ ಜೋಶಿ ಅವರನ್ನು ಶಂಕರ ಸೇವಾ ಸಮತಿಯಿಂದ ಸನ್ಮಾನಿಸಲಾಯಿತು.

ADVERTISEMENT

ಆಗಮಿಸಿದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಕಾರ್ಯ ಜರುಗಿತು. ಶಂಕರ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ಮಕರಿ, ಕಾರ್ಯದರ್ಶಿ ಪ್ರದೀಪ ಕುಲಕರ್ಣಿ ಅರ್ಚಕ ಗಿರೀಶ ನಾಡಗೇರ, ಸುಶೀಲ ನಾಡಗೇರ, ವಿಜೇಂದ್ರ ಶಿರೋಳ, ಸುಬ್ರಹ್ಮಣ್ಯ ನಾಡಗೇರ, ಗಿರಿಜಾ ನಾಡಗೇರ, ದೀಪಾ ಕುಲಕರ್ಣಿ, ಉಷಾ ಮಕರಿ, ಸುರಭಿ ನಾಡಗೇರ, ನಾಗರತ್ನ ದೇಶಪಾಂಡೆ ಇದ್ದರು.

ರಟ್ಟೀಹಳ್ಳಿ ಪಟ್ಟಣದಲ್ಲಿ ಬುಧವಾರ ಶಂಕರ ಸೇವಾ ಸಮಿತಿಯಿಂದ ಶಂಕರಾಚಾರ್ಯ ಜಯಂತಿ ಉತ್ಸವದ ಅಂಗವಾಗಿ ಶಂಕರಾಚಾರ್ಯ ಭಾವಚಿತ್ರ ಹಾಗೂ ಪಾಲಕಿ ಸೇವೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.