ADVERTISEMENT

ಶಿಗ್ಗಾವಿ: ಗೋವಿನಜೋಳ ಖರೀದಿ ಕೇಂದ್ರಕ್ಕೆ ಆಗ್ರಹಿಸಿ ಮನವಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 2:23 IST
Last Updated 20 ಡಿಸೆಂಬರ್ 2025, 2:23 IST
ಶಿಗ್ಗಾವಿ ಪಟ್ಟಣದಲ್ಲಿ ಶುಕ್ರವಾರ ಅಖಂಡ ಕನರ್ಾಟಕ ರೈತ ಸಂಘ ತಾಲ್ಲೂಕು ಪದಾಧಿಕಾರಿಗಳು ಗೋವಿನಜೋಳ ಬೆಳೆಗೆ ಬೆಲೆ ನಿಗದಿ, ಖರೀದಿ ಕೇಂದ್ರ ಆರಂಭಿಸಬೇಕೆಂದು ಆಗ್ರಹಿಸಿ ಎಪಿಎಂಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಯಲ್ಲಪ್ಪ ಗೊಣೆಣ್ಣವರ ಅವರಿಗೆ ಮನವಿ ಸಲ್ಲಿಸಿದರು.
ಶಿಗ್ಗಾವಿ ಪಟ್ಟಣದಲ್ಲಿ ಶುಕ್ರವಾರ ಅಖಂಡ ಕನರ್ಾಟಕ ರೈತ ಸಂಘ ತಾಲ್ಲೂಕು ಪದಾಧಿಕಾರಿಗಳು ಗೋವಿನಜೋಳ ಬೆಳೆಗೆ ಬೆಲೆ ನಿಗದಿ, ಖರೀದಿ ಕೇಂದ್ರ ಆರಂಭಿಸಬೇಕೆಂದು ಆಗ್ರಹಿಸಿ ಎಪಿಎಂಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಯಲ್ಲಪ್ಪ ಗೊಣೆಣ್ಣವರ ಅವರಿಗೆ ಮನವಿ ಸಲ್ಲಿಸಿದರು.   

ಶಿಗ್ಗಾವಿ: ಗೋವಿನಜೋಳ ಬೆಳೆಗೆ ಬೆಲೆ ನಿಗದಿ, ಖರೀದಿ ಕೇಂದ್ರ ಆರಂಭಿಸಬೇಕೆಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ತಾಲ್ಲೂಕು ಪದಾಧಿಕಾರಿಗಳು ಶುಕ್ರವಾರ ಎಪಿಎಂಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಯಲ್ಲಪ್ಪ ಗೊಣೆಣ್ಣವರ ಅವರಿಗೆ ಮನವಿ ಸಲ್ಲಿಸಿದರು.

ಬೆಂಬಲ ಬೆಲೆ ನಿಗದಿ ಪ್ರಕಾರ ಗೋವಿನ ಜೋಳ ಖರೀದಿ ಕೇಂದ್ರ ಆರಂಭವಾಗಬೇಕು. ಈಗಾಗಲೇ 2191 ರೈತರ ನೋಂದಣಿಯಾಗಿದ್ದು, ಇಲ್ಲಿನ ರೈತರ ಗೋವಿನ ಜೋಳ ಶಿಗ್ಗಾವಿಯಲ್ಲಿ ಖರೀದಿಯಾಗಬೇಕು. ಶಿಗ್ಗಾವಿ ರೈತರ ಗೋವಿನ ಜೋಳ ಖರೀದಿ ಬೇರೆಡೆ ಆದರೆ ಅದರ ಸಾಗಾಣಿಕೆ ವೆಚ್ಚವನ್ನು ಸರ್ಕಾರ ನೀಡಬೇಕು. ಈ ಕುರಿತು ಕೆ.ಎಂ.ಎಫ್ ವಿಚಾರಿಸಿದಾಗ ನಮ್ಮ ಟಾರ್ಗೆಟ್ ಮುಕ್ತಾಯವಾಗಿದೆ. ಮುಂದೆ ಮತ್ತೆ ಖರೀದಿ ಮಾಡಲು ಸಾಧ್ಯವಿಲ್ಲ ಎಂಬ ಬೇಜವಾಬ್ದಾರಿ ಕೇಳಿಕೆ ನೀಡುತ್ತಿದ್ದಾರೆ. ತಕ್ಷಣ ಖರೀದಿ ಮುಂದುವರೆಯಬೇಕು ಎಂದು ರೈತರು ಆಗ್ರಹಿಸಿದರು.

ಬೇಡಿಕೆಗಳು ಈಡೇರಬೇಕು. ಸೋಮವಾರದವರೆಗೆ ಗಡವು ನೀಡಲಾಗಿದೆ. ವಿಳಂಬವಾದರೆ ಮಂಗಳವಾರ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು. ಅದರಲ್ಲಿ ಅನಾಹುತಗಳಾದರೆ ಅದಕ್ಕೆ ತಾಲ್ಲೂಕು ಆಡಳಿತ ಹೊಣೆಯಾಗಲಿದೆ ಎಂದು ಪ್ರತಿಭಟನಾ ನಿರತ ರೈತರು ಆಗ್ರಹಿಸಿದರು.

ADVERTISEMENT

ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಕಾಶ ಬಾಕರ್ಿ, ಮಂಜುನಾಥ ಕಂಕನವಾಡ, ಧರ್ಮನಗೌಡ ಹೊನ್ನಗೌಡ್ರ, ಕರೆಪ್ಪ ಆಳೂರ, ಶಶಿಧರ ಹೊನ್ನಣ್ಣವರ, ರಮೇಶ ಜೋಳದ, ಚಂದ್ರಪ್ಪ ಸಾವಕ್ಕನವರ, ಪ್ರಕಾಶ ನಿಕಂ, ಶಿವಪ್ಪ ಗಬ್ಬೂರ, ಈಶ್ವರಗೌಡ ಪಾಟೀಲ, ಆಳಪ್ಪ ಬೇಟಗೇರಿ, ಅಭಿನಂದ ಕೋಟಿ, ಸುರಪ್ಪ ಸೊರಟೂರ ಸೇರಿದಂತೆ ಸುತ್ತಲಿನ ಗ್ರಾಮದ ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.