
ಶಿಗ್ಗಾವಿ: ‘ಮಠಮಂದಿರಗಳು ಅನ್ನ, ಅಕ್ಷರ ನೀಡುವ ಪ್ರಮುಖ ಕೇಂದ್ರಗಳಾಗಿವೆ. ಅದಕ್ಕೆ ಕಾಶೀ ಶ್ರೀಗಳ ಆಶೀರ್ವಾದವೇ ಕಾರಣ’ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ತಾಲ್ಲೂಕಿನ ಬಿಸನಳ್ಳಿ ಗ್ರಾಮದ ಕಾಶೀ ಪೀಠದ ಪಂಚಾಚಾರ್ಯ ವೇದ, ಆಗಮ, ಸಂಸ್ಕೃತಿ, ಸಂಗೀತ, ಯೋಗ ಮತ್ತು ಜ್ಯೋತಿಷ ಪಾಠಶಾಲೆ ಆವರಣದಲ್ಲಿ ಮಂಗಳವಾರ ನಡೆದ ಇಷ್ಟಲಿಂಗ ಪೂಜೆ, ವೀರಶೈವ ಪಂಚಾಚಾರ, ಆಧ್ಯಾತ್ಮಿಕ ಆಶೀರ್ವಚನ ಹಾಗೂ ಮಾನವ ಧರ್ಮ ಸಮಾವೇಶ, ಕಾಶೀ ಶ್ರೀಗಳ 36ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವ, ಪುಸ್ತಕ ಬಿಡುಗಡೆ ಸೇರಿದಂತೆ ವಿವಿಧ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ವಿವಿಧತೆಯಲ್ಲಿ ಏಕತೆ ಕಂಡ ದೇಶ ಭಾರತ. ವಿದೇಶಗಳು ತಮ್ಮಲ್ಲಿ ಅಪರಾಧ ಕೃತ್ಯ ಹೆಚ್ಚಿಸಿಕೊಂಡು ನಾಶವಾಗುತ್ತಿವೆ. ಆದರೆ ಭಾರತವು ಭಕ್ತಿ ಮಾರ್ಗ ಗೌರವಿಸುವ ಪುಣ್ಯ ನೆಲವಾಗಿದೆ’ ಎಂದರು.
ಸಿದ್ದಲಿಂಗ ಹಿರೇಮಠ ಮಾತನಾಡಿದರು. ಅಥಣಿ ಲೇಖಕ ಅಪ್ಪಾಸಾಹೇಬ ಅಲಬಾದಿ, ಭಾರತಿ ಅಲಬಾಡದಿ ಅವರು ಬರೆದ ‘ಪ್ರೇಮೋತ್ಸಾಹ’, ‘ಹೈಕೋ ಹಂದರ’ ಗ್ರಂಥ ಬಿಡುಗಡೆ ಮಾಡಿದರು.
ಕಾಶೀ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಅರಳೆಲೆಮಠದ ರೇವಣಸಿದ್ದೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶಾಖಾಪುರದ ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ, ಹಿರೇಮಣಕಟ್ಟಿ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಹಿರೇಬೆಂಡಿಗೇರಿ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು.
ಪಾಠಶಾಲೆ ಉಪಾಧ್ಯಕ್ಷ ಶಂಬಣ್ಣ ಮಾಮಲೇಪಟ್ಟಣಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಭಾರತ ಮಾಜಿ ಸಂಸದ ಎಂ.ಸಿ. ಕುನ್ನೂರ, ನಿವೃತ್ತ ನ್ಯಾಯಾಧೀಶ ಎಸ್.ಬಿ. ವಸ್ತ್ರದಮಠ, ಕಲ್ಲಪ್ಪ ಅಜೂರ, ಶಂಬಣ್ಣ ಅಜೂರ, ವೀರೇಶ ಅಜೂರ, ನಾಗರಾಜ ಹೊಸಮನಿ, ಗುರುಶಾಂತಪ್ಪ ನರೇಗಲ್ಲ, ಗದಿಗೆಪ್ಪ ಶೆಟ್ಟರ, ಸಾಗರ ಕುರುವತ್ತಿ ಮಠ, ಗಂಗಮ್ಮ ದೇಸಾಯಿ, ವಿರೂಪಾಕ್ಷಪ್ಪ ಪಟೇದ ಇದ್ದರು.
ಪ್ರಶಸ್ತಿ ಪ್ರದಾನ: ಕಿರಣಕುಮಾರ ವಿವೇಕವಂಶಿ, ಸಿದ್ದಲಿಂಗಪ್ಪ ನರೇಗಲ್ಲ, ಸದಾನಂದ ಹಿರೇಮಠ, ಅಪ್ಪಾಸಾಹೇಬ ಅಲಿಬಾದಿ, ಮಹಾದೇವಿ ಚವಾನ, ಶಶಿಕಲಾ ತಾಳಸದಾರ, ಡಾ. ಶಿವಕುಮಾರ, ಅಶೋಕ ಗಂಗಾಲ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.