ಶಿಗ್ಗಾವಿ: ‘ಅಹಿಂಸಾ ತತ್ವದಿಂದ ಮನುಕುಲದ ಬದುಕು ಯಶಸ್ವಿಯಾಗಲು ಸಾಧ್ಯವಿದೆ ಎಂಬುವುದನ್ನು ತೋರಿಸಿದ ಮಹಾವೀರರ ಆದರ್ಶ ಚಿಂತನೆಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಅದಕ್ಕೆ ಸಾತ್ವಿಕ ಬದುಕು ಅನುಸರಿಸಬೇಕು’ ಎಂದು ತಹಶೀಲ್ದಾರ್ ರವಿ ಕೊರವರ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಗುರುವಾರ ತಾಲ್ಲೂಕು ಆಡಳಿತ, ತಾಲ್ಲೂಕು ಜೈನ್ ಸಮಾಜದ ಸಹಯೋಗದಲ್ಲಿ ನಡೆದ ಭಗವಾನ್ ಮಹಾವೀರ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲ್ಲೂಕು ಜೈನ್ ಸಮಾಜದ ಅಧ್ಯಕ್ಷ ರವಿ ಪಾಸರ್ ನೇತೃತ್ವ ವಹಿಸಿ ಮಾತನಾಡಿ, ‘ಭಗವಾನ್ ಮಹಾವೀರರು ಅಹಿಂಸಾ ಬೋಧನೆ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ. ಅದು ಸರ್ವ ಸಮುದಾಯದ ಜನರಿಗೆ ಅನ್ವಯವಾಗುತ್ತಿದೆ. ಶಾಂತಿ, ನೆಮ್ಮದಿಗಾಗಿ ಅಹಿಂಸೆ ಮಾರ್ಗದಲ್ಲಿ ನಡೆಯುವುದು ಮುಖ್ಯವಾಗಿದೆ’ ಎಂದರು.
ಮುಖ್ಯ ಶಿಕ್ಷಕ ವರ್ಧನ ಛಬ್ಬಿ, ಶಿವಾನಂದ ಮ್ಯಾಗೇರಿ, ಭಾರತಿ ಚಬ್ಬಿ ಮಾತನಾಡಿದರು.
ಮುಂಡರಾದ ಮಹಾವೀರ ಧಾರವಾಡ, ಕುಭೇರಪ್ಪ ಸಿದ್ದಣ್ಣವರ, ಪ್ರಕಾಶ ಧರೆಪ್ಪನವರ, ಅಭಿನಂದ ಅವರಾದಿ, ಸುಧೀರ ಛಬ್ಬಿ, ವಿಶ್ವನಾಥ ಹರವಿ, ಕಾಳಪ್ಪ ಚ.ಬಡಿಗೇರ, ಅರ್ಜಪ್ಪ ಲಮಾಣಿ, ಬಸಲಿಂಗಪ್ಪ ನವಲಗುಂದ ಸೇರಿದತೆ ಜೈನ್ ಸಮಾಜದ ಅನೇಕ ಮುಖಂಡರು, ತಹಶೀಲ್ದಾರ್ ಕಚೇರಿ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.