ರಟ್ಟೀಹಳ್ಳಿ: ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವ ಬುಧವಾರ ಅದ್ದೂರಿಯಾಗಿ ನಡೆಯಿತು.
ಬೆಳಿಗ್ಗೆ ಶಿವಾಜಿ ನಗರದಲ್ಲಿರುವ ಬನ್ನಿಮಹಾಂಕಾಳಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಶಿವಾಜಿ ವೃತ್ತದಲ್ಲಿ ಶಿವಾಜಿ ಮಹಾರಾಜರ ಕಂಚಿನ ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿದರು. ಮಹಿಳೆಯರು ಪೂರ್ಣ ಕುಂಭದೊಂದಿಗೆ ಧರ್ಮಗಿರಿ ಮಠದವರೆಗೆ ಮೆರವಣಿಗೆ ಮೂಲಕ ಸಾಗಿದರು.
ನಂತರ ಶಿವಾಜಿ ಮಹಾರಾಜರ ತೊಟ್ಟಲೋತ್ಸವ ನಡೆಯಿತು. ಸಂಜೆ 4ಗಂಟೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆಶ್ವಾರೂಢ ಶಿವಾಜಿ ಮಹಾರಾಜರ ಪುತ್ಥಳಿಯ ಮೆರವಣಿಗೆ ಸಾಗಿತು. ದಾರಿಯುದ್ದಕ್ಕೂ ಶಿವಾಜಿ ಮಹಾರಾಜರಿಗೆ ಜೈಕಾರ ಹಾಕಲಾಯಿತು.
ತಾಲ್ಲೂಕು ಮರಾಠ ಸಮಾಜದ ಅಧ್ಯಕ್ಷ ಕೆ.ವೈ.ಬಾಜೀರಾಯರ, ನಗರ ಘಟಕ ಅಧ್ಯಕ್ಷ ಮನೋಜ ಗೋಣೆಪ್ಪನವರ, ಮುಖಂಡರಾದ ಪಿ.ಡಿ.ಬಸನಗೌಡ್ರ, ವೀರನಗೌಡ ಪ್ಯಾಟೀಗೌಡ್ರ, ಪಾಲಾಕ್ಷಗೌಡ ಪಾಟೀಲ, ವಿನಾಯಕ ಅಗಡಿ, ಸಂದೀಪ ಪಾಟೀಲ, ಗಣೇಶ ವೇರ್ಣೇಕರ, ಸಿದ್ದಪ್ಪ ಜಾಧವ, ಹನುಮಂತ ಪರೀಟ, ಪರಮೇಶಪ್ಪ ಕಟ್ಟೇಕಾರ, ನಾಗರಾಜ ಸಾಳುಂಕೆ. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.