
ಪ್ರಜಾವಾಣಿ ವಾರ್ತೆ
ಹಿರೇಕೆರೂರ: ತಾಲ್ಲೂಕಿನ ಚಿಕ್ಕೆರೂರ ಗ್ರಾಮದಲ್ಲಿ ಶುಕ್ರವಾರ ಟ್ರ್ಯಾಕ್ಟರ್‌ನಲ್ಲಿ ಮೇವು ಕೊಂಡೊಯ್ಯುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿತು.
ಮೇವು ಮತ್ತು ಟ್ರ್ಯಾಕ್ಟರ್ ತಾಲ್ಲೂಕಿನ ತಾವರಗಿ ಗ್ರಾಮದ ರೈತ ಪಟ್ಟರಾಜಪ್ಪ ಕೆಂಜಡಪ್ಪ ಅಜ್ಜಪ್ಪನವರ ಎಂಬುವವರಿಗೆ ಸೇರಿದ್ದು.
ಘಟನೆಯಲ್ಲಿ ₹13 ಸಾವಿರ ಮೌಲ್ಯದ ಮೇವು ಸೇರಿದಂತೆ ₹2.40 ಲಕ್ಷ ಮೌಲ್ಯದ ಟ್ರ್ಯಾಕ್ಟರ್ ಟ್ರ್ಯಾಲಿಗೆ ಹಾನಿಯಾಗಿದೆ. ಹಂಸಬಾವಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.