ADVERTISEMENT

ಸಿಬಾರ ಕರಿಯಾಲ್‌ | ₹15ಲಕ್ಷ ಬಿಡುಗಡೆ: ಶಾಸಕ ಬಸವರಾಜ ಶಿವಣ್ಣನವರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 3:02 IST
Last Updated 27 ಅಕ್ಟೋಬರ್ 2025, 3:02 IST
ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ಸಿಬಾರ ಕರಿಯಾಲ್‌ ಕಟ್ಟೆಯ ಭೂಮಿ ಪೂಜೆಯನ್ನು ಶಾಸಕ ಬಸವರಾಜಶಿವಣ್ಣಣವರ ನೆರವೇರಿಸಿದರು 
ಬ್ಯಾಡಗಿ ತಾಲ್ಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ಸಿಬಾರ ಕರಿಯಾಲ್‌ ಕಟ್ಟೆಯ ಭೂಮಿ ಪೂಜೆಯನ್ನು ಶಾಸಕ ಬಸವರಾಜಶಿವಣ್ಣಣವರ ನೆರವೇರಿಸಿದರು    

ಬ್ಯಾಡಗಿ: ತಾಲ್ಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ₹35 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ‘ಸಿಬಾರ ಕರಿಯಾಲ್‌‘ ನಿರ್ಮಾಣ ಕಾಮಗಾರಿಗೆ ಭಾನುವಾರ ಶಾಸಕ ಬಸವರಾಜ ಶಿವಣ್ಣನವರ ಭೂಮಿ ಪೂಜೆ ನೆರವೇರಿಸಿದರು.

ನಂತರ  ಮಾತನಾಡಿದ ಅವರು, ‘ಪುರಾತನ ಸಿಬಾರದ ಕಂಬಗಳು ಈಗಾಗಲೇ ಶಿಥಿಲಗೊಂಡಿದ್ದು, ಬೇರೆ ಸಿಬಾರವನ್ನು ನಿರ್ಮಾಣ ಮಾಡಬೇಕಾಗಿದೆ. ಶಾಸಕರ ಸ್ಥಳೀಯ ಕ್ಷೇಮಾಭಿವೃದ್ಧಿ ಅನುದಾನದಲ್ಲಿ ₹15 ಲಕ್ಷ ಬಿಡುಗಡೆ ಮಾಡಲಾಗುವುದು. ಇನ್ನುಳಿದ ಹಣವನ್ನು ಸಾರ್ವಜನಿಕರಿಂದ ವಂತಿಗೆಯ ರೂಪದಲ್ಲಿ ಸಂಗ್ರಹಿಸಿ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದರು.

ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್‌.ಆರ್‌.ಪಾಟೀಲ ಮಾತನಾಡಿ, ಸರ್ಕಾರದ ಸಹಾಯಧನದ ಜೊತೆಗೆ ಗ್ರಾಮಸ್ಥರ ಸಹಾಯವೂ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ದೇಣಿಗೆ ಸಂಗ್ರಹಿಸಿ ಇನ್ನುಳಿದ ಕಾಮಗಾರಿ ಪೂರ್ಣಗೊಳಿಸುವಂತೆ ಮನವಿ ಮಾಡಿದರು.

ADVERTISEMENT

ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಸಿಬಾರ ಮರು ನಿರ್ಮಾಣದಿಂದ ಗ್ರಾಮಕ್ಕೆ ಒಳ್ಳೆಯದಾಗಲಿದೆ. ಬೆಳೆ ಹುಲುಸಾಗಿ ಬೆಳೆದು ರೈತರ ಸಂಕಷ್ಟ ದೂರವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ರಾಜೀವ್ ಶಿಗ್ಲಿ ಪ್ರಾಸ್ತಾವಿಕ ಮಾತನಾಡಿ, ‘ಗ್ರಾಮದಲ್ಲಿರುವ ಸಿಬಾರ ಒಂದೂವರೆ ಶತಮಾನಕ್ಕಿಂತ ಹಳೆಯದಾಗಿದೆ. ಅದರ ಜೀರ್ಣೋದ್ಧಾರ ಮಾಡಲು ಯುವಕರು ಮುಂದಾಗಿದ್ದಾರೆ. ಯುವ ಶಕ್ತಿ ಮುಂದಾದಲ್ಲಿ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಲಾಗುವುದು’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮ ನಾಯಕ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದಾನಪ್ಪ ಚೂರಿ, ಮುಖಂಡರಾದ ಶಿವಸಪ್ಪ ಕುಳೆನೂರ, ಮಂಜಣ್ಣ ಎಲಿ, ವಿಜಯ್ ಬಳ್ಳಾರಿ ಗದಿಗಯ್ಯ ಹಿರೇಮಠ, ಮಾರ್ತಂಡಪ್ಪ ಬ್ಯಾಟಪ್ಪನವರ, ಉಮೇಶ ಸವಣೂರ, ಚಂದ್ರು ಗೌರಾಪುರ, ಸತೀಶ ಪಾಟೀಲ, ನಿಂಗಪ್ಪ ಕರಸಿದ್ದಪ್ಪನವರ, ತಿಪ್ಪಣ್ಣ ಕುರಿ, ಸಣ್ಣಪಕ್ಕೀರಪ್ಪ ಬಟ್ಟಲಕಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.