ADVERTISEMENT

ಹಿರೇಕೆರೂರ: ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 8:18 IST
Last Updated 8 ಜನವರಿ 2026, 8:18 IST
ಹಿರೇಕೆರೂರ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಬುಧವಾರ ಸಿ.ಎಂ ಸಿದ್ಧರಾಮಯ್ಯ ಅವರು ಕರ್ನಾಟಕ ರಾಜ್ಯದ ಅತೀ ಹೆಚ್ಚಿನ ದಿನ ಮುಖ್ಯಮಂತ್ರಿಗಳಾಗಿ ದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು
ಹಿರೇಕೆರೂರ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಬುಧವಾರ ಸಿ.ಎಂ ಸಿದ್ಧರಾಮಯ್ಯ ಅವರು ಕರ್ನಾಟಕ ರಾಜ್ಯದ ಅತೀ ಹೆಚ್ಚಿನ ದಿನ ಮುಖ್ಯಮಂತ್ರಿಗಳಾಗಿ ದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು   

ಹಿರೇಕೆರೂರ: ಕರ್ನಾಟಕವನ್ನು ಆಳಿದ ದೀರ್ಘಕಾಲದ ಮುಖ್ಯಮಂತ್ರಿ ಎಂಬ ದಾಖಲೆಗೆ ಸಿದ್ಧರಾಮಯ್ಯನವರು ಪಾತ್ರರಾಗಿದ್ದಾರೆ. 2 ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಬಡವರು, ದೀನದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಆಶಾಕಿರಣವಾಗಿ ಕೆಲಸ ಮಾಡಿದ್ದಾರೆ. ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಮತ್ತು ಗ್ಯಾರಂಟಿ ಯೋಜನೆಗಳ ಮೂಲಕ ಕರುನಾಡಿನ ಜನರ ಮನೆ-ಮನಗಳಲ್ಲಿ ತಲುಪಿದ್ದಾರೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಬುಧವಾರ ರಾಜ್ಯದ ಅತೀ ಹೆಚ್ಚಿನ ದಿನ ಮುಖ್ಯಮಂತ್ರಿಗಳಾಗಿ ದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿ ಅವರು ಮಾತನಾಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿ, ಶಿವಣ್ಣ ಗಡಿಯಣ್ಣನವರ, ಮಹೇಂದ್ರ ಬಡಳ್ಳಿ, ದುರಗಪ್ಪ ನೀರಲಗಿ, ಕಂಠಾಧರ ಅಂಗಡಿ, ಪ್ರಕಾಶ ಹಿತ್ಲಳ್ಳಿ, ಪ್ರಕಾಶ ಅರಳಿಕಟ್ಟಿ, ಸುಧಾ ಚಿಂದಿ, ರಾಜು ಕರಡಿ, ಸನಾವುಲ್ಲಾ ಮಕಾನದಾರ , ವಿನಯ ಪಾಟೀಲ, ಶಂಶದಾ ಕುಪ್ಪೇಲೂರ, ಕವಿತಾ ಹಾರ‍್ನಳ್ಳಿ, ರವಿ ನಾಯ್ಕರ್, ಪಿ.ಬಿ.ನಿಂಗನಗೌಡ್ರ, ಗಣೇಶಪ್ಪ ನಿಂಬೆಗೊಂದಿ, ಸುರೇಶ ಲಮಾಣಿ, ವಿಜಯ ಹುಲ್ಮನಿ ಮತ್ತು ಇತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.