ರಾಣೆಬೆನ್ನೂರು: ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕು. ಮಕ್ಕಳು, ತಂದೆ, ತಾಯಿ ಹಾಗೂ ಗುರುಗಳಿಗೆ ವಿಧೇಯರಾಗಿ ಗೌರವ ಸಲ್ಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಹೇಳಿದರು.
ಇಲ್ಲಿನ ಹುಣಸೀಕಟ್ಟಿ ರಸ್ತೆಯ ನ್ಯಾಷನಲ್ ಪಬ್ಲಿಕ್ ಸ್ಕೂಲಿನಲ್ಲಿ ಗುರುವಾರ ನಡೆದ ಮಕ್ಕಳಿಗೆ ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮತ್ತು ನಾಯಕತ್ವ ಪ್ರತಿಜ್ಞಾ ಸ್ವೀಕಾರ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಜೀವನದಲ್ಲಿ ಅಸಾಧ್ಯವೆಂಬುದು ಯಾವುದು ಇಲ್ಲ. ಪರಿಶ್ರಮ ಪಟ್ಟರೆ ಎಲ್ಲವೂ ಸುಲಭ ಸಾಧ್ಯ. ದೂರದರ್ಶನದಲ್ಲಿ ಮಕ್ಕಳಿಗಾಗಿ ಪ್ರಸಾರವಾಗುವ ಶೈಕ್ಷಣಿಕ ವಿಷಯಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ವಿಕ್ಷೀಸಲು ಪೋಷಕರು ಹಾಗೂ ಶಾಲೆಯ ಶಿಕ್ಷಕರು ಪ್ರೋತ್ಸಾಹಿಸಬೇಕು ಎಂದರು.
ಉತ್ತಮ ಸಂವಹನಕ್ಕಾಗಿ ಬಳಕೆ ಆಗಬೇಕಿರುವ ಮೊಬೈಲ್ ಆನೇಕ ಅಪರಾಧ ಪ್ರಕರಣಗಳಿಗೆ ಬಳಕೆಯಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಸಾಧನೆ ಮಾಡುವ ಅದ್ಭುತ ಶಕ್ತಿಯಿದೆ. ಇದನ್ನು ಹೊರತೆಗೆಯುವ ಕೆಲಸ ಮಾಡಬೇಕು. ವಿದ್ಯೆಯೊಂದೇ ಶಾಶ್ವತ. ಪ್ರತಿಯೊಬ್ಬ ವಿದ್ಯಾರ್ಥಿಯೂ ಗುರಿ ಮುಟ್ಟಲು, ಸಾಧನೆ ಮಾಡುವಲ್ಲಿ ಛಲ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷೆ ವಜ್ರೇಶ್ವರಿ ಲದ್ವಾ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ನಿರ್ದೇಶಕರು ಹಾಗೂ ವೈದ್ಯರಾದ ಡಾ.ಎಂ.ಎಂ ಅನಂತರೆಡ್ಡಿ ಮತ್ತು ಡಾ. ಬಿ.ಆರ್ ಸಾವಕಾರ, ಅರುಣಾ ಕಬಾಡಿ, ಮಲ್ಲಿಕಾರ್ಜುನ ಅಂಗಡಿ, ಮುರುಗೇಶ ಮಹಾಂತಶೆಟ್ಟರ, ವಿಜಯಾನಂದ ಬೆಲ್ಲದ, ರೇಷ್ಮಾ ಲದ್ವಾ, ಸುಷ್ಮಾ ಲದ್ವಾ, ಮುಖ್ಯ ಶಿಕ್ಷಕಿ ಶಿವಲೀಲಾ ಕುರುವತ್ತಿ, ಜಯಶ್ರೀ ಎಸ್.ಬಿ, ಅನುಷಾ ಡಿ, ಗೌರಿ ಗೋಪಾಳಿ, ತೌಸಿಫ್ ಸೈಕಲ್‌ಗಾರ, ತೇಜಸ್ವಿನಿ ಜೆ. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.