ADVERTISEMENT

ತಾರತಮ್ಯ ತೊಡೆದು ಹಾಕಿ: ಹೆಗಡಾಳ

ಶರಣ ಸಾಹಿತ್ಯ ಪರಿಷತ್‌ ಸಂಸ್ಥಾಪನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2024, 16:13 IST
Last Updated 31 ಆಗಸ್ಟ್ 2024, 16:13 IST
ರಾಣೆಬೆನ್ನೂರಿನ ನಾಗಶಾಂತಿ ಪಪೂ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ ಶರಣ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದಿಂದ ಏರ್ಪಡಿಸಿದ ಶಸಾಪ ಸಂಸ್ಥಾಪನಾ ದಿನಾಚರಣೆ ಕಾರ್ಯಯಕ್ರಮದಲ್ಲಿ  ಪ್ರಾಚಾರ್ಯ ಆರ್‌.ವಿ. ಹೆಗಡಾಳ ಮಾತನಾಡಿದರು.
ರಾಣೆಬೆನ್ನೂರಿನ ನಾಗಶಾಂತಿ ಪಪೂ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ ಶರಣ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದಿಂದ ಏರ್ಪಡಿಸಿದ ಶಸಾಪ ಸಂಸ್ಥಾಪನಾ ದಿನಾಚರಣೆ ಕಾರ್ಯಯಕ್ರಮದಲ್ಲಿ  ಪ್ರಾಚಾರ್ಯ ಆರ್‌.ವಿ. ಹೆಗಡಾಳ ಮಾತನಾಡಿದರು.   

ರಾಣೆಬೆನ್ನೂರು: ಸಮಾಜದಲ್ಲಿ ಆಚರಣೆಯಲ್ಲಿರುವ ಮೂಢನಂಬಿಕೆ ಮತ್ತು ಅರ್ಥವಿಲ್ಲದ ಆಚರಣೆಗಳು, ಹದಗೆಡುತ್ತಿರುವ ಜಾತಿ, ಮತ, ಲಿಂಗ, ವರ್ಣ ಬೇಧ ಶೋಷಿತರ ತುಳಿತ ಈ ಅನಿಷ್ಟ ಪದ್ದತಿಗಳಿಂದ ಸಮಾಜ ಹಾಳಾಗುತ್ತಿರುವದನ್ನು ಮನಗಂಡು ಇದಕ್ಕೆ ಪರಿಹಾರವಾಗಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ವಚನ ಸಾಹಿತ್ಯ ಮಹತ್ವದ ಪಾತ್ರ ವಹಿಸುತ್ತವೆ ಎಂದು ಎಸ್‌ಜೆಎಂವಿ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ.ಆರ್‌.ವಿ.ಹೆಗಡಾಳ ಹೇಳಿದರು.

ಇಲ್ಲಿನ ನಾಗಶಾಂತಿ ಪಿಯು ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶರಣ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದಿಂದ ಏರ್ಪಡಿಸಿದ್ದ ಶಸಾಪ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸುತ್ತೂರು ಮಠದ ಲಿಂ.ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ರಾಷ್ಟ್ರಮಟ್ಟದಲ್ಲಿ ಶರಣ ಸಾಹಿತ್ಯ ವಿಚಾರಗಳನ್ನು ಜನಸಮುದಾಯಕ್ಕೆ ಸಾಮೂಹಿಕವಾಗಿ ಅರಿವು ಮೂಡಿಸಲು ಒಂದು ಸಂಘಟನೆ ಅಗತ್ಯವಿದೆ ಎಂದು ತಿಳಿದು 1986 ರಲ್ಲಿ ರಾಜ್ಯ ಮಟ್ಟದಲ್ಲಿ ಶರಣ ಸಾಹಿತ್ಯ ಪರಿಷತ್ತನ್ನು ಸ್ಥಾಪನೆ ಮಾಡಿದರು ಎಂದರು.

ADVERTISEMENT

ಲಿಂ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಜನ್ಮದಿನ ಆ.9 ರಂದು ಶರಣ ಸಾಹಿತ್ಯ ಪರಿಷತ್‌ನ ಸಂಸ್ಥಾಪನಾ ದಿನವನ್ನಾಗಿ ಆಚರಿಸಲು ನಿರ್ಣಯಕೈಗೊಂಡರು. ಸುತ್ತೂರು ಮಠದ ಜೆಎಸ್‌ಎಸ್‌ಎಸ್‌ ವಿದ್ಯಾಪೀಠದ ಸಂಸ್ಥೆಗಳು ರಾಜ್ಯದಲ್ಲಿ ಮತ್ತು ದೇಶ ವಿದೇಶದಲ್ಲಿ 350ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುತ್ತಿದೆ. ಉಚಿತ ಪ್ರಸಾದ ನಿಲಯ ಆರಂಭಿಸಿ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಿದೆ ಎಂದರು.

ನಿವೃತ್ತ ಗ್ರಂಥಪಾಲಕ ಎಸ್‌.ಕೆ.ನೇಸ್ವಿ ಅವರು ಸಂಸ್ಥಾಪನಾ ದಿನಾಚರಣೆ ಬಗ್ಗೆ ಮಾತನಾಡಿದರು. ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷೆ ರಾಜೇಶ್ವರಿ ಬಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಅನ್ನಪೂರ್ಣ ಬೆನ್ನೂರು, ಶೀಲಾ ಮಾಕನೂರ, ಬಸವರಾಜ ಪಾಟೀಲ, ಮಂಗಳಾ ಪಾಟೀಲ, ಎಸ್‌.ಎಚ್‌.ಪಾಟೀಲ, ಪ್ರಭುಲಿಂಗಪ್ಪ ಹಲಗೇರಿ, ಕೆ.ಎಚ್‌.ಮುಕ್ಕಣ್ಣವನರ, ಗುತ್ತೆಪ್ಪ ಹಳೇಮನಿ, ರಮೇಶ ಬಡಕರಿಯಪ್ಪನವರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.